ರಿಯಲ್ ಲುಕ್​ನಲ್ಲಿ ಕಾಣಿಸಿಕೊಂಡ ಪಂಜಾಬ್​ ಕಾ ಪುತ್ತರ್​..!

ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ತಮ್ಮ ಅದ್ಭುತ ಬ್ಯಾಟಿಂಗ್​ನಿಂದ ಅಷ್ಟೇ ಅಲ್ಲ, ಡ್ರೆಸ್ಸಿಂಗ್ ಸ್ಟೈಲ್, ವೇಷ ಭೂಷಣಗಳ ಮೂಲಕವು ಅಭಿಮಾನಿಗಳನ್ನ ಆಕರ್ಷಿಸುತ್ತಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಕೋಟ್ಯಾಂತರ ಅಭಿಮಾನಿಗಳನ್ನ ಕೊಹ್ಲಿ ಹೊಂದಿದ್ದಾರೆ. ಕೊಹ್ಲಿ ಹಾಕುವ ಒಂದೊಂದು ಪೋಸ್ಟ್, ಪೋಟೋಗೂ ಲಕ್ಷಾಂತರ ಲೈಕ್ಸ್, ಸಾವಿರಾರು ಕಾಮೆಂಟ್ಸ್​​ ಹರಿದು ಬರುತ್ವೆ. ಕೊಹ್ಲಿ ಸದ್ಯ ಟ್ವಿಟರ್​ನಲ್ಲಿ ಪಂಜಾಬ್​ ಗೆಟಪ್​ನಲ್ಲಿ ತಲೆಗೆ ಪಂಜಾಬಿ ಪೇಟಾ ಸುತ್ತಿಕೊಂಡು, ಜುಬ್ಬಾ ಪೈಜಾಮ್​ ಹಾಕೊಂಡಿರುವ ಪೋಟೋ ಪೋಸ್ಟ್ ಮಾಡಿದ್ದಾರೆ.ಪಂಜಾಬಿ ಭಾಷೆಯಲ್ಲೇ ತಮ್ಮ ಫಾಲೋವರ್ಸ್​ಗೆ ಶುಭ ಹಾರೈಸಿದ್ದಾರೆ.ಕೊಹ್ಲಿಯ ಈ ಹೊಸ ಲುಕ್​ಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಕೊಹ್ಲಿ ದೆಹಲಿ ನಿವಾಸಿಯಾಗಿದ್ದರೂ, ಅವರು ಪಕ್ಕಾ ಪಂಜಾಬ್​ ಕಾ ಪುತ್ತರ್​.