ವಿರಾಟ್ ಕೊಹ್ಲಿ ಉತ್ತಮ ನಾಯಕನಲ್ಲ ಅಂತ ವಾರ್ನ್ ಹೇಳಿದ್ದೇಕೆ..?

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಮಾಜಿ ಲೆಗ್​ಸ್ಪಿನ್ ದಿಗ್ಗಜ ಶೇನ್ ವಾರ್ನ್, ಆಶ್ಚರ್ಯಕರ ಹೇಳಿಕೆ ನೀಡೋ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಹೌದು..! ಇತ್ತೀಚಿಗಷ್ಟೆ ಐಪಿಎಲ್ ರಾಜಸ್ಥಾನ್ ರಾಯಲ್ಸ್​ ತಂಡದ ರಾಯಭಾರಿಯಾಗಿ ಆಯ್ಕೆಯಾದ ವಾರ್ನ್, ವಿರಾಟ್ ಕೊಹ್ಲಿ ತಂಡವನ್ನ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ..! ಕೊಹ್ಲಿ ಓರ್ವ ಉತ್ತಮ ಮ್ಯಾನ್ ಮ್ಯಾನೇಜರ್ ಕೂಡ ಹೌದು. ಆದ್ರೆ ಟ್ಯಾಕ್ಟಿಕಲ್ ಆಗಿ ಕೊಹ್ಲಿಗಿಂತ ನ್ಯೂಜಿಲೆಂಡ್​ ತಂಡದ ನಾಯಕ ಕೇನ್ ವಿಲಿಯಮ್ಸನ್ ಮತ್ತು ಆಸಿಸ್ ನಾಯಕ ಟಿಮ್ ಪೇಯ್ನ್, ಬೆಸ್ಟ್ ಅಂತ ಹೇಳಿಕೆ ನೀಡಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವ ವಹಿಸಿಕೊಂಡ ನಂತರ ಟೀಮ್ ಇಂಡಿಯಾ ಕೇವಲ ಸ್ವದೇಶದಲ್ಲಿ ಅಷ್ಟೇ ಅಲ್ಲ..ವಿದೇಶಗಳಲ್ಲೂ ಟೆಸ್ಟ್, ಏಕದಿನ ಮತ್ತು ಟಿ-ಟ್ವೆಂಟಿ ಸರಣಿಗಳನ್ನ ಗೆಲ್ಲಲಾರಂಭಿಸಿದೆ. ನಾಯಕನಾದ ಕೆಲವೇ ವರ್ಷಗಳಲ್ಲಿ ಕೊಹ್ಲಿ ತಮ್ಮ ಸಾಮರ್ಥ್ಯವನ್ನ ತೋರಿಸಿದ್ದಾರೆ ಅಂತ ವಾರ್ನ್, ಇದೇ ವೇಳೆ ತಿಳಿಸಿದ್ರು.