ವಿರಾಟ್ ಕೊಹ್ಲಿ 2018ರ ಶ್ರೇಷ್ಠ ಕ್ರಿಕೆಟಿಗ..!

 

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, 2018ರ ವಿಸ್ಡನ್ ಕ್ರಿಕೆಟರ್ ಆಫ್ ದಿ ಇಯರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2018ರಲ್ಲಿ ಟೆಸ್ಟ್, ಏಕದಿನ ಮತ್ತು ಟಿ-ಟ್ವೆಂಟಿ ಕ್ರಿಕೆಟ್​ನಲ್ಲಿ ಒಟ್ಟು 2735 ರನ್​ಗಳಿಸಿರೋ ಕೊಹ್ಲಿ, ಸತತ ಮೂರನೇ ಭಾರಿಗೆ ಪ್ರಶಸ್ತಿಯನ್ನ ತನ್ನದಾಗಿಸಿಕೊಂಡಿದ್ದಾರೆ. ​ಇಂಗ್ಲೆಂಡ್​​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಅದ್ಭುತ ಬ್ಯಾಟಿಂಗ್ ಮತ್ತು ಲಿಮಿಟೆಡ್ ಓವರ್ ಕ್ರಿಕೆಟ್​ನಲ್ಲಿ ಭರ್ಜರಿ ಫಾರ್ಮ್​ನಿಂದ ಕೊಹ್ಲಿ, ಇಂಗ್ಲೆಂಡ್​ ಟೆಸ್ಟ್ ತಂಡದ ನಾಯಕ ಜೋ ರೂಟ್​ರನ್ನ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. ಇನ್ನು ಈ ಹಿಂದೆ ಕೊಹ್ಲಿ ಸರ್​ ಗ್ಯಾರಿ ಸಾಬರ್ಸ್ ವರ್ಷದ ಕ್ರಿಕೆಟಿಗ, ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಮತ್ತು ಐಸಿಸಿ ಏಕದಿನ ಕ್ರಿಕೆಟಿಗ ಪ್ರಶಸ್ತಿ ಸಹ ತನ್ನದಾಗಿಸಿಕೊಂಡಿದ್ರು. ಮತ್ತೊಂದೆಡೆ ಭಾರತ ಮಹಿಳಾ ತಂಡದ ಆಟಗಾರ್ತಿ ಸ್ಮೃತಿ ಮಂದಾನ, 2018ರಲ್ಲಿ ಏಕದಿನ ಮತ್ತು ಟಿ-ಟ್ವೆಂಟಿ ಕ್ರಿಕೆಟ್​ನಲ್ಲಿ ಶ್ರೇಷ್ಠ ಸಾಧನೆ ಮಾಡಿ ವಿಸ್ಡನ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

 


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv