ಆರ್​ಸಿಬಿ ಸೋಲಿಗೆ ಕ್ಯಾಪ್ಟನ್​ ವಿರಾಟ್​ ಕೊಹ್ಲಿಯೇ ಕಾರಣ..!

ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್​ ಗಂಭೀರ್​ ಮತ್ತೊಮ್ಮೆ ವಿರಾಟ್ ಕೊಹ್ಲಿ ನಾಯಕತ್ವವನ್ನ ಟೀಕಿಸಿದ್ದಾರೆ.ಐಪಿಎಲ್​ನಲ್ಲಿ ಆರ್​ಸಿಬಿ ತಂಡವನ್ನ ಯಶಸ್ವಿಯಾಗಿ ಮುನ್ನಡೆಸುವಲ್ಲಿ ವಿಫಲರಾಗುತ್ತಿರುವ ಕೊಹ್ಲಿ, ತಂಡದ ಸೋಲಿಗೆ ಬೌಲರ್ಸ್​​ಗಳನ್ನ ದೂಷಿಸೋದು ಸರಿಯಲ್ಲ.ಕೊಹ್ಲಿ ಬ್ಯಾಟಿಂಗ್​ನಲ್ಲಿ ಮಾಸ್ಟರ್ ಅದ್ರಲ್ಲಿ ಎರಡು ಮಾತಿಲ್ಲ. ಆದ್ರೆ ಕ್ಯಾಪ್ಟೆನ್ಸಿ ವಿಚಾರಕ್ಕೆ ಬಂದ್ರೆ, ಕೊಹ್ಲಿ ಕಲಿಯೋದು ಬೆಟ್ಟದಷ್ಟಿದೆ. ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡೋದ್ರಿಂದ ಹಿಡಿದು ಎಲ್ಲಾ ವಿಭಾಗಗಳಲ್ಲೋ ಕೊಹ್ಲಿ ಪದೇ ಪದೇ ಎಡವುತ್ತಿದ್ದಾರೆ.ಪ್ರತಿ ಪಂದ್ಯ ಸೋತಾಗಲೂ ಕೊಹ್ಲಿ ಬೌಲರ್ಸ್​ಗಳತ್ತ ಬೊಟ್ಟು ಮಾಡುವುದರ ಬದಲು, ಸೋಲಿಗೆ ತಾವೇ ಹೊಣೆ ಹೊರಬೇಕು ಎಂದು ಗಂಭೀರ್ ಹೇಳಿದ್ದಾರೆ.ಕೊಹ್ಲಿ ನಾಯಕತ್ವದ ಬಗ್ಗೆ ಗಂಭೀರ್ ಕಿಡಿಕಾರುತ್ತಿರುವುದು ಇದೇ ಮೊದಲೇನಲ್ಲ.ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ ಕೂಡ ಗಂಭೀರ್ ಕೊಹ್ಲಿ ಬಗ್ಗೆ ಮಾತನಾಡಿದ್ರು.ಆರ್​ಸಿಬಿ ತಂಡದ ನಾಯಕರಾಗಿ ತಮ್ಮನ್ನ ಮುಂದುವರಿಸುತ್ತಿರುವ ಆರ್​ಸಿಬಿ ಫ್ರಾಂಚೈಸಿಗೆ ಕೊಹ್ಲಿ ಋಣಿಯಾಗಿರ ಎಂದಿದ್ರು.