ವಿರಾಟ್​ ಕೊಹ್ಲಿಗೆ ಹೇಳಿ ಮಾಡಿಸಿದಂತಿವೆ ಇಂಗ್ಲೆಂಡ್​ ಪಿಚ್​ಗಳು..!

ವಿಶ್ವಕ್ರಿಕೆಟ್​​ನಲ್ಲಿ ಇಂಗ್ಲೆಂಡ್​ ಪಿಚ್​ಗಳು ಅಂದ್ರೆ, ಒಂದು ಕಾಲದಲ್ಲಿ ಬೌಲರ್​ಗಳ ಫೇವರಿಟ್ ಆಗಿದ್ವು. ಬೌನ್ಸಿ ಟ್ರ್ಯಾಕ್​ಗಳಲ್ಲಿ ಬ್ಯಾಟ್ಸ್​​​ಮನ್​ಗಳು ರನ್​ಗಳಿಸಲು ಪರದಾಡುತ್ತಿದ್ರು. ಮಾರಕ ಬೌಲಿಂಗ್​ ಮೂಲಕ ಬೌಲರ್ಸ್​ ವಿಕೆಟ್​ ಬೇಟೆಯಾಡುತ್ತಿದ್ರು.ಆದ್ರೆ,ಇತ್ತೀಚಿನ ವರ್ಷಗಳಲ್ಲಿ ಇಂಗ್ಲೆಂಡ್​ ಪಿಚ್​​ಗಳು ಬ್ಯಾಟಿಂಗ್​ಗೆ ಹೆಚ್ಚು ಸಹಕಾರಿಯಾಗಿವೆ. ಉಪಖಂಡದ ಪಿಚ್​ಗಳಂತೆ ಫ್ಲಾಟ್ ಟ್ರ್ಯಾಕ್​ಗಳಾಗಿ ಬದಲಾಗಿವೆ. ಇದರಿಂದ ಏಕದಿನ ಪಂದ್ಯಗಳಲ್ಲಿ ಮಿನಿಮಮ್​ 600 ರನ್​ ದಾಖಲಾಗುತ್ತಿವೆ. ನಿನ್ನೆ ಮುಕ್ತಾಯಗೊಂಡ ಇಂಗ್ಲೆಂಡ್​- ಪಾಕಿಸ್ತಾನ ನಡುವಿನ ಏಕದಿನ ಸರಣಿ ಇದಕ್ಕೆ ಬೆಸ್ಟ್ ಎಕ್ಸಾಂಪಲ್. ಈ ಸರಣಿಯ ಪ್ರತಿ ಪಂದ್ಯದಲ್ಲೂ ಸ್ಕೋರ್ ಬೋರ್ಡ್​​ 300ರ ಗಡಿ ದಾಟಿದೆ. ಹೀಗಾಗಿ ವಿಶ್ವಕಪ್​ ಟೂರ್ನಿಯಲ್ಲೂ ರನ್​ಹೊಳೆ ಹರಿಯವ ನಿರೀಕ್ಷೆ ಇದೆ. ಇಂಗ್ಲೆಂಡ್​ ಕ್ರಿಕೆಟ್​ ಬೋರ್ಡ್​ ಸ್ಕೋರ್ ಬೋರ್ಡ್​ನಲ್ಲಿ 500 ರನ್​ ದಾಖಲಿಸಲು ಸಾಧ್ಯವಾಗುವಂತೆ ಅಲ್ಟ್ರೇಷನ್ ಮಾಡಿಸಿದೆ.ಇದೇ 30 ರಿಂದ ಆಂಗ್ಲರ ನೆಲದಲ್ಲಿ 12ನೇ ವಿಶ್ವಕಪ್​ ಟೂರ್ನಿ ನಡೆಯಲಿದೆ.

ವಿರಾಟ್​ ಕೊಹ್ಲಿಗೆ ಹೇಳಿ ಮಾಡಿಸಿದ ಪಿಚ್​ಗಳು..!

ಹೌದು, ವಿಶ್ವಕಪ್​ಗೆ ಸಿದ್ಧವಾಗಿರೋ ಇಂಗ್ಲೆಂಡ್​ ಪಿಚ್​ಗಳು ಟೀಂ ಇಂಡಿಯಾ ಕ್ಯಾಪ್ಟನ್,​ ವಿರಾಟ್ ಕೊಹ್ಲಿಗೆ ಹೇಳಿ ಮಾಡಿಸಿದಂತಿವೆ. ಸದ್ಯಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಕೊಹ್ಲಿ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಐಪಿಎಲ್​ಗು ಮುನ್ನ ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಹೀಗಾಗಿ ಆಂಗ್ಲರ ನಾಡಿನಲ್ಲೂ ಕೊಹ್ಲಿ ಬ್ಯಾಟಿಂಗ್ ವೈಭವ ಮುಂದುವರಿಯುತ್ತೆ ಅಂತಿದ್ದಾರೆ ಫ್ಯಾನ್ಸ್. ಅಷ್ಟೇ ಅಲ್ಲ, ಎದುರಾಳಿ ತಂಡ ಎಷ್ಟೇ ಬಿಗ್​ಸ್ಕೋರ್ ಮಾಡಿದ್ರು, ಚೇಸಿಂಗ್ ಕಿಂಗ್ ಕೊಹ್ಲಿ ಟೀಂ ಇಂಡಿಯಾಗೆ ಪಂದ್ಯ ಗೆಲ್ಲಿಸಿಕೊಡ್ತಾರೆ ಅನ್ನೋದು ಅವರ ಕಾನ್ಫಿಡೆನ್ಸ್.ಇದಕ್ಕೆ ಕಾರಣ ಕೊಹ್ಲಿಯ ಅದ್ಭುತ ದಾಖಲೆ.ಟೀಂ ಇಂಡಿಯಾ 330ಪ್ಲಸ್​ ಟಾರ್ಗೆಟ್​ ಚೇಸ್​ ಮಾಡಿ ಗೆದ್ದ ಪಂದ್ಯಗಳಲ್ಲಿ, ಕೊಹ್ಲಿ ಅದ್ವಿತೀಯ ದಾಖಲೆ ಬರೆದಿದ್ದಾರೆ. 12 ಇನ್ನಿಂಗ್ಸ್​​ಗಳಲ್ಲಿ 75.7ರ ಸರಾಸರಿ, 121.9 ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟ್​ ಬೀಸಿ 757 ರನ್ ಕಲೆಹಾಕಿದ್ದಾರೆ. ಅದೇನೆ ಇರ್ಲಿ ವಿಶ್ವಕಪ್​ನಲ್ಲಿ ಕೊಹ್ಲಿ ತಮ್ಮ ಕ್ಲಾಸ್ ಬ್ಯಾಟಿಂಗ್ ಮೂಲಕ ಮತ್ತಷ್ಟು ದಾಖಲೆಗನ್ನ ನಿರ್ಮಿಸಲಿ. ಚಾಣಾಕ್ಷ ಕ್ಯಾಪ್ಟೆನ್ಸಿ ಮೂಲಕ ಭಾರತಕ್ಕೆ ಮೂರನೇ ವಿಶ್ವಕಪ್ ತಂದುಕೊಡಲಿ ಅನ್ನೋದೆ ಅಭಿಮಾನಿಗಳ ಆಶಯ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv