ಬ್ಯಾಟಿಂಗ್ ಅಷ್ಟೇ ಅಲ್ಲ, ಸೋಲೊದ್ರಲ್ಲೂ ಕೊಹ್ಲಿ ನಂ.1

ಕ್ರಿಕೆಟ್​ ಜಗತ್ತಿನಲ್ಲಿ ಸದ್ಯ ನಂ.1 ಬ್ಯಾಟ್ಸ್​ಮನ್ ಅಂದ್ರೆ ಅದು ವಿರಾಟ್ ಕೊಹ್ಲಿ.ಅದ್ಭುತ ಬ್ಯಾಟಿಂಗ್ ಮೂಲಕ ಕೊಹ್ಲಿ ಈಗಾಗಲೇ ಹಲವು ದಾಖಲೆಗಳನ್ನ ನಿರ್ಮಿಸಿದ್ದಾರೆ. ಟೀಂ ಇಂಡಿಯಾ ಕ್ಯಾಪ್ಟನ್ ಆಗಿಯೂ ಭಾರತಕ್ಕೆ ಹಲವು ಟ್ರೋಫಿಗಳನ್ನ ಗೆದ್ದುಕೊಟಿದ್ದಾರೆ.ಆದ್ರೆ ಐಪಿಎಲ್​ನಲ್ಲಿ ಮಾತ್ರ ವಿರಾಟ್ ಕೊಹ್ಲಿ ಸಿಹಿಗಿಂತ ಕಹಿ ಸವಿದಿದ್ದೆ ಹೆಚ್ಚು.ಈಗ ಐಪಿಎಲ್​ನಲ್ಲಿ ಅತಿಹೆಚ್ಚು ಸೋಲು ಕಂಡ ಆಟಗಾರ ಎಂಬ ಬೇಡವಾದ ದಾಖಲೆಗೆ ಕೊಹ್ಲಿ ಪಾತ್ರರಾಗಿದ್ದಾರೆ.ಈ ಮೂಲಕ ಕೆಕೆಆರ್​ ತಂಡದ ರಾಬಿನ್ ಉತ್ತಪ್ಪರನ್ನ ಹಿಂದಿಕ್ಕಿದ್ದಾರೆ. 12 ವರ್ಷಗಳಿಂದ ಆರ್​ಸಿಬಿ ಪರ ಆಡುತ್ತಿರುವ ಕೊಹ್ಲಿ, ಒಟ್ಟು 87 ಪಂದ್ಯಗಳನ್ನ ಸೋತಿದ್ದಾರೆ. ಆರ್​ಸಿಬಿ, ಮಂಬೈ ಇಂಡಿಯನ್ಸ್ ಪರವೂ ಆಡಿರುವ ಉತ್ತಪ್ಪ, ಈವರೆಗು 85 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ 81, ಕೆಕೆಆರ್ ಕ್ಯಾಪ್ಟನ್ ದಿನೇಶ್ ಕಾರ್ತಿಕ್ 79 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದಾರೆ.