ವಿಶ್ವಕಪ್​ಗಾಗಿ ಕೊಹ್ಲಿ ಭರ್ಜರಿ ವರ್ಕೌಟ್​..! ರೆಸ್ಟ್​ಗಿಂತ ಫಿಟ್​ನೆಸ್ ಇಂಪಾರ್ಟೆಂಟ್​..!

ಐಪಿಎಲ್​ ಎಂಬ ಚುಟಕು ಕ್ರಿಕೆಟ್​ ಹಬ್ಬ ಮುಗಿದಿದೆ.ಈಗ,ಏಕದಿನ ವಿಶ್ವಕಪ್ ಮಹಾಸಂಗ್ರಾಮದತ್ತ ಕ್ರಿಕೆಟ್ ಫ್ಯಾನ್ಸ್ ಚಿತ್ತ ನೆಟ್ಟಿದೆ.ಇಂಗ್ಲೆಂಡ್​​ನಲ್ಲಿ ಇದೇ 30ರಿಂದ ಆರಂಭವಾಗಲಿರೋ ವಿಶ್ವಕಪ್ ಟೂರ್ನಿಗೆ ಎಲ್ಲಾ ತಂಡಗಳು ಸಿದ್ಧತೆ ನಡೆಸಿವೆ.ಇಷ್ಟು ದಿನ ಐಪಿಎಲ್​ನಲ್ಲಿ ಬ್ಯುಸಿ ಇದ್ದ ಟೀಂ ಇಂಡಿಯಾ ಆಟಗಾರರು,ಸದ್ಯ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ.ಆದ್ರೆ ಟೀಂ ಇಂಡಿಯಾ ಸಾರಥಿ ವಿರಾಟ್ ಕೊಹ್ಲಿ,ವಿಶ್ವಕಪ್​ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಲು ಭರ್ಜರಿ ವರ್ಕೌಟ್ ನಡೆಸಿದ್ದಾರೆ.ಒಂದೂವರೆ ತಿಂಗಳು ನಡೆಯುವ ಟೂರ್ನಿಯಲ್ಲಿ ಫಿಟ್​ ಆಗಿರಲು ಜಿಮ್​ನಲ್ಲಿ ಬೆವರು ಹರಿಸುತ್ತಿದ್ದಾರೆ.ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕೊಹ್ಲಿ,ಆಂಗ್ಲರ ನಾಡಿನಲ್ಲೂ ರನ್​ಹೊಳೆ ಹರಿಸುವ  ವಿಶ್ವಾಸದಲ್ಲಿದ್ದಾರೆ.