ವಿರಾಟ್​​-ಅನುಷ್ಕಾ ರಿಲ್ಯಾಕ್ಸ್​ ಮಾಡ್ತಿರೋದು ಯಾರ ಜೊತೆ..?!

ಭಾರತ ಸೆಲೆಬ್ರೆಟಿ ಲೋಕದ ಹಾಟ್​ ಕಪಲ್​ ವಿರಾಟ್​ ಹಾಗೂ ಅನುಷ್ಕಾ ಸದ್ಯ ಫ್ರೀ ಟೈಮ್​ನ ಎಂಜಾಯ್​ ಮಾಡ್ತಿದ್ದಾರೆ. ಕೆಲ ವರ್ಷಗಳಿಂದ ಸ್ನೇಹಿತರಾಗಿದ್ದ ಇವರು, ಕಳೆದ ವರ್ಷದಿಂದ ಜೀವನ ಸಂಗಾತಿಗಳಾಗಿದ್ದಾರೆ. ಡಿಸೆಂಬರ್​ನಲ್ಲಿ ಇಟಲಿಗೆ ತೆರಳಿ ಮದುವೆಯಾಗುವ ಮೂಲಕ ಈ ಜೋಡಿ ಹೆಸರಾಗಿತ್ತು.

 

ಇನ್ನು, ಈ ವರ್ಷದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ, ಐಪಿಎಲ್​ ಅಂತ ವಿರಾಟ್​ ಬ್ಯುಸಿ ಆಗಿದ್ರೆ, ಅತ್ತ ಅನುಷ್ಕಾ ತಮ್ಮ ಪರಿ ಚಿತ್ರ ಹಾಗೂ ಇತರೆ ಶೆಡ್ಯೂಲ್​​ಗಳಲ್ಲಿ ನಿರತರಾಗಿದ್ರು. ಫ್ರೀ ಆದ ತಕ್ಷಣ ಐಪಿಎಲ್​ನ ಹಲವು ಪಂದ್ಯಗಳಲ್ಲೂ ಕಾಣಿಸಿಕೊಂಡಿದ್ದ ಅನುಷ್ಕಾ, ರಾಯಲ್​ ಚಾಲೆಂಜರ್ಸ್ ಬೆಂಗಳೂರು ಕ್ಯಾಪ್ಟನ್​ ವಿರಾಟ್​​ಗೆ ಚಿಯರ್​ ಕೂಡ ಮಾಡಿದ್ದರು. ಇದೀಗ ಇಂಗ್ಲೆಂಡ್​ ಪ್ರವಾಸಕ್ಕೂ ಮುನ್ನ ಕೊಂಚ ಬಿಡುವು ಮಾಡಿಕೊಂಡಿರುವ ವಿರಾಟ್​ ಪತ್ನಿ ಹಾಗೂ ಫ್ಯಾಮಿಲಿ ಜತೆ ಟೈಮ್​ ಸ್ಪೆಂಡ್​ ಮಾಡಿದ್ದಾರೆ.

ವಿರಾಟ್​-ಅನುಷ್ಕಾ ಮಧ್ಯೆ ಇನ್ನೊಬ್ರು ಯಾರು..?

ವಿರಾಟ್​ ಕೊಹ್ಲಿಗೆ ಮುದ್ದು ಮುದ್ದು ಶ್ವಾನಗಳಂದ್ರೇ ಶಾಣೆ ಇಷ್ಟ ಅನ್ನೋದು ಎಷ್ಟೋ ಬಾರಿ ಬಯಲಾಗಿದೆ. ಈ ಹಿಂದೆ ವೈಟ್​ ಪಮೇರಿಯನ್​ ಹಾಗೂ ಗೋಲ್ಡನ್​ ಲ್ಯಾಬ್ರಡಾರ್​ ನಾಯಿಗಳನ್ನ ಮುದ್ದು ಮಾಡ್ತಿದ್ದ ವಿರಾಟ್​, ಈಗ ಮತ್ತೊಂದು ಪಪ್ಪಿ ಜತೆ ಕಾಣಿಸಿಕೊಂಡಿದ್ದಾರೆ.

ಸದ್ಯ, ಬೀಗಲ್​ ಜಾತಿಯ ಶ್ವಾನವೊಂದನ್ನ ಪಡೆದಿರುವ ಚೀಕು ಅದಕ್ಕೆ ಬ್ರುನೋ ಅಂತ ಹೆಸರಿಟ್ಟಿದ್ದಾರೆ. ಇತ್ತೀಚೆಗಷ್ಟೇ ಅವರು ತಮ್ಮ ಪೋಸ್ಟ್​​ವೊಂದರಲ್ಲಿ ಬ್ರುನೋ ಇದ್ದ ಮೇಲೆ ಬೇಜಾರ್​ ಅನ್ನೋದೇ ಇಲ್ಲ ಅಂತ ಬರೆದುಕೊಂಡಿದ್ದರು. ಇದೀಗ, ನಟಿ ಅನುಷ್ಕಾ ಇನ್​​ಸ್ಟಾಗ್ರಾಂನಲ್ಲಿ ಮಾಡಿರುವ ಪೋಸ್ಟ್​​ನಲ್ಲಿ ಕ್ಯೂಟ್​​ ಆಗಿರುವ ಪಪ್ಪಿಯೊಂದಿಗೆ ದಂಪತಿಗಳಿಬ್ರೂ ರಿಲ್ಯಾಕ್ಸ್​ ಆಗಿ ಕಂಡುಬಂದಿದ್ದಾರೆ. ಆ ಮುದ್ದು ಮುದ್ದಾಗಿರುವ ಪಪ್ಪಿ ಇಬ್ಬರಲ್ಲೂ ನಗೆಯನ್ನ ಮೂಡಿಸಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv