ಕಾಲಿಗೆ ಬ್ಯಾಂಡೇಜ್ ಹಾಕೊಂಡೇ ಮರಿ ಟೈಗರ್ ವರ್ಕೌಟ್..!

ಸ್ಯಾಂಡಲ್​ವುಡ್ ಮರಿಟೈಗರ್ ವಿನೋದ್​ ಪ್ರಭಾಕರ್ ಹುರಿಗಟ್ಟಿದ ದೇಹ, ಭರ್ಜರಿ ಸ್ಟಂಟ್​ನಿಂದಲೇ ಕನ್ನಡಿಗರ ಮನೆಮಾತಾದವರು. ಟೈಗರ್ ಪ್ರಭಾಕರ್ ಗತ್ತಿನಲ್ಲೇ ಘರ್ಜಿಸೋ ಮರಿ ಟೈಗರ್ ಇದೀಗ ಚಂದನವನದ ಬಹುಬೇಡಿಕೆ ನಟ. ಸದ್ಯ ವಿನೋದ್​ ಬತ್ತಳಿಕೆಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಈಗಾಗ್ಲೆ ರಗಡ್ ಸಿನಿಮಾ ರಾಜ್ಯಾದ್ಯಂತ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣ್ತಿದೆ. 8 ಪ್ಯಾಕ್​ನಲ್ಲಿ ಕಾಣಿಸಿಕೊಂಡಿರುವ ವಿನೋದ್​ ಅಭಿಮಾನಿಗಳ ಮನಗೆದ್ದಿದ್ದಾರೆ. ದುರಾದೃಷ್ಟ ಅಂದ್ರೆ ಇತ್ತೀಚಿಗಷ್ಟೇ ‘ವರದ’ ಚಿತ್ರದ ಫೈಟ್​ ಸೀನ್ ಚಿತ್ರೀಕರಣದ ವೇಳೆ ಆಕಸ್ಮಿಕವಾಗಿ ಬಿದ್ದು ಕಾಲಿನ ಮೂಳೆಗೆ ಪೆಟ್ಟು ಮಾಡಿಕೊಂಡಿದ್ರು. ಇದೀಗ ಮರಿ ಟೈಗರ್ ಅಖಾಡಕ್ಕೆ ಧುಮುಕಲು ಮತ್ತೇ ರೆಡಿಯಾಗ್ತಿದೆ.

‘ವರದ’ನಿಗಾಗಿ ಮತ್ತೆ ವರ್ಕೌಟ್​ ಶುರು..!
ಚಿತ್ರದ ಶೂಟಿಂಗ್ ವೇಳೆ ಕಾಲಿಗೆ ಪೆಟ್ಟು ಮಾಡಿಕೊಂಡಿದ್ರೂ ಚಿತ್ರದ ಟಾಕಿ ಪೋಷನ್​ನಲ್ಲಿ ಭಾಗಿಯಾಗೋ ಮೂಲಕ ವಿನೋದ್ ಸಿನಿಮಾ ಪ್ರೀತಿ ಏನು ಅನ್ನೋದನ್ನ ತೋರಿಸಿದ್ರು. ಇದೀಗ ಕಾಲು ನೋವಿನ ನಡುವೆಯೂ ಕಾಲಿಗೆ ಬ್ಯಾಂಡೇಜ್ ಸುತ್ತಿಕೊಂಡು ಮನೆಯಲ್ಲೇ ಭರ್ಜರಿ ವರ್ಕೌಟ್ ಮಾಡ್ತಿದ್ದಾರೆ. ಜಿಮ್​ ಸೆಟ್​ನಲ್ಲಿ ಸ್ನೇಹಿತರ ಸಹಾಯದಿಂದ ಡಂಬೆಲ್ಸ್ ಹಾಗೂ ವೇಯ್ಟ್ ಲಿಪ್ಟಿಂಗ್ ಎತ್ತುವ ಮೂಲಕ ಭಾರೀ ಕಸರತ್ತು ನಡೆಸುತ್ತಿದ್ದಾರೆ. ಮತ್ತೇ ರಗಡ್​​ ಲುಕ್​ನಲ್ಲಿ ಅಬ್ಬರಿಸೋಕೆ ವಿನೋದ್ ತಯಾರಾಗ್ತಿದ್ದಾರೆ. ಸದ್ಯ ವಿನೋದ್ ಬತ್ತಳಿಕೆಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು ಆದಷ್ಟು ಬೇಗ ಗುಣಮುಖವಾಗಿ ಸಿನಿ ಅಖಾಡದಲ್ಲಿ ಮತ್ತೆ ಘರ್ಜಿಸಲಿ ಅನ್ನೋದೇ ನಮ್ಮ ಆಶಯ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv