ರವಿ ಬಸ್ರೂರು​ ಡೈರೆಕ್ಷನ್​ನಲ್ಲಿ ವಿನಯ್​ ರಾಜ್​ಕುಮಾರ್

ಉಗ್ರಂ ಹಾಗೂ ಕೆಜಿಎಫ್​ ಸೇರಿದಂತೆ ಕನ್ನಡದ ಸಾಕಷ್ಟು ಬ್ಲಾಕ್​​ ಬಸ್ಟರ್​ ಹಿಟ್​ ಸಿನಿಮಾಗಳಿಗೆ ಸಂಗೀತ ನೀಡೋ ಮೂಲಕ ಮನೆ ಮಾತಾಗಿರೋ ಸಂಗೀತ ನಿರ್ದೇಶಕ ಸಕಲಕಲಾವಲ್ಲಭ ರವಿಬಸ್ರೂರು ಈಗ ದೊಡ್ಮನೆ ಮೊಮ್ಮಗ ವಿನಯ್​ ರಾಜ್​ಕುಮಾರ್​ಗೆ ಆ್ಯಕ್ಷನ್​ ಕಟ್​ ಹೇಳೋದಕ್ಕೆ ತಯಾರಿ ನಡೆಸಿದ್ದಾರೆ.ಪಕ್ಕಾ ಮಾಸ್​ ಎಂಟರ್​ಟೈನರ್​ ಆಗಿರೋ ಸಿನಿಮಾಕ್ಕೆ ಪವರ್​ ಸ್ಟಾರ್​ ಪುನೀತ್​ರಾಜ್​ಕುಮಾರ್ ಆಪ್ತ ಎನ್​.ಎಸ್​ ರಾಜ್​ಕುಮಾರ್​ ಹಣ ಹಾಕ್ತಾ ಇದ್ದು, 2020ರಲ್ಲಿ ಈ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ. ಸದ್ಯ ಇರುವ ಪ್ಲಾನ್​ ಪ್ರಕಾರ ವಿನಯ್​ ರಾಜ್​ಕುಮಾರ್​ರ ಈ ಬಾರಿಯ ಬರ್ತ್​ಡೇ ಅಂದ್ರೆ ಮೇ 7ನೇ ತಾರೀಖಿನಂದು ಸಿನಿಮಾ ಟೈಟಲ್​ ಹಾಗೂ ಫಸ್ಟ್​ ಲುಕ್​ ಪೊಸ್ಟರ್​ ರಿಲೀಸ್​ ಆಗಲಿದೆ.
ಗ್ರಾಮಾಯಣ ಸಿನಿಮಾ ಬಳಿಕ ರವಿಬಸ್ರೂರು ಸಿನಿಮಾ.
ರವಿಬಸ್ರೂರು ಸದ್ಯ ಒನ್​ ಲೈನ್​ ಕಥೆಯನ್ನಷ್ಟೆ ವಿನಯ್​ ಹಾಗೂ ಕುಟುಂಬಕ್ಕೆ ಹೇಳಿದ್ದು, ಸ್ಕ್ರಿಪ್ಟ್​ ಕೆಲಸ ಇನ್ನೂ ಆರಂಭಿಸಬೇಕಿದೆ ಅಂತಾರೆ. ಜೊತೆಗೆ ಕೆಜಿಎಫ್​ ಸೀಕ್ವೆಲ್​ ಹಾಗೂ ಸಾಕಷ್ಟು ಸಿನಿಮಾಗಳಲ್ಲಿ ಸಧ್ಯ ರವಿ ಬಸ್ರೂರ್​ ಬ್ಯುಸಿಯಾಗಿದ್ದು, ಈ ಎಲ್ಲಾ ಕಮಿಟ್​ ಮೆಂಟ್​ಗಳು ಮುಗಿದ ಬಳಿಕವಷ್ಟೆ ವಿನಯ್​ ರಾಜ್​ಕುಮಾರ್​ ಸಿನಿಮಾ ಸ್ಕ್ರಿಪ್ಟ್​ ಕೆಲಸ ಶುರು ಮಾಡಲಾಗುತ್ತೆ ಅಂದಿದ್ದಾರೆ ರವಿ ಬಸ್ರೂರ್​. ಕಳೆದ ವರ್ಷವಷ್ಟೆ ಕಟಕ ಸಿನಿಮಾ ಡೈರೆಕ್ಷನ್​ ಮಾಡಿ ಜನ ಮನ್ನಣೆ ಗಳಿಸಿದ್ರು ರವಿ ಬಸ್ರೂರು. ಈ ಸಿನಿಮಾಕ್ಕೂ ರಾಜ್​ಕುಮಾರ್​ ಅವ್ರೇ ಹಣ ಹಾಕಿದ್ರು. ಇನ್ನೂ ವಿನಯ್​ರಾಜ್​ಕುಮಾರ್​ ಕೂಡ ಗ್ರಾಮಾಯಣ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಗ್ರಾಮಾಯಣ ಸಿನಿಮಾ ಮುಗಿದ ಬಳಿಕ ಹೊಸ ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರೆ.