ಪ್ರಹ್ಲಾದ್ ಜೋಶಿ ವಿರುದ್ಧ ವಿನಯ್ ಕುಲಕರ್ಣಿ ಕೆಂಡ

ಧಾರವಾಡ: ನಗರದ ಲಿಂಗಾಯತ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಕಟ್ಟಡ ದುರಂತದ ವಿಷಯ ನೆನೆದು ಭಾವುಕರಾದ್ರು. ಇದೇ ವೇಳೆಯಲ್ಲಿ ಮಾತನಾಡಿದ ಇವರು, ಇಲ್ಲಿ ಕೆಲವರು  ವಿನಾಕಾರಣ ನನ್ನ ಹೆಸರು ಹಾಳು ಮಾಡುತ್ತಿದ್ದಾರೆ ಎಂದು ಧಾರವಾಡ ಲೋಕಸಭೆ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ವಿರುದ್ದ ಕೆಂಡ ಕಾರಿದ್ರು. ಆ ಕಟ್ಟಡಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಅದು ನಮ್ಮ ಮಾವನವರಿಗೆ ಸೇರಿದ್ದು. ನಾಲ್ಕು ಜನ ಮಾಲೀಕರಲ್ಲಿ ಬಿಜೆಪಿಯವರು ಇದ್ದಾರೆ. ಆ ಕಟ್ಟಡ ಯಾವಾಗ ಕಟ್ಟಿದ್ದೊ ನನಗೆ ಗೊತ್ತಿಲ್ಲ. ಆದ್ರೆ, ಪ್ರಲ್ಹಾದ್ ಜೋಶಿ ಕುತಂತ್ರ ಮಾಡಿ ನನ್ನ ಹೆಸರು ಹಾಳು ಮಾಡುತ್ತಿದ್ದಾರೆ. ಕಟ್ಟಡ ಬಿದ್ದಾಗ ಜೀವ ರಕ್ಷಣೆ ಮಾಡುವಾಗ ನಾನು ನಾಲ್ಕು ದಿನ ಅಲ್ಲಿಂದ ಕದಲಲಿಲ್ಲ. ಇವರೆಲ್ಲ ಬಂದ್ರು ಪೋಟೊ ತೆಗೆಸಿಕೊಂಡು ವಾಪಸ್ ಹೋದ್ರು. ನನ್ನ ಮಾವನಿಗೆ  72 ವರ್ಷ. ಆದ್ರೂ ಅವರು ಅವರು ಜೈಲಲ್ಲಿದ್ದಾರೆ. ಇರಲಿ ಅವರು ಕಟ್ಟಿದ ಬಿಲ್ಡಿಂಗ್ ಬಿದ್ದಿದೆ. ನಾನು ಅವರ ಮುಖಾ ನೋಡಲು ಹೋಗಿಲ್ಲ‌. ನನ್ನ ಮಾವ ಆಸ್ಪತ್ರೆ ಸೇರಿದ್ರೂ ನಾನು ಹೋಗಿಲ್ಲ. ಜೋಶಿ ಹಿಂದೆ ಬಿದ್ದು ಜೈಲಿಗೆ ಕಳಿಸ್ತಾಯಿದಾನೆ‌. ನಮ್ಮ ಮುರುಘಾಮಠದ ಸ್ವಾಮಿಯನ್ನು ಕರಕೊಂಡು ಬಂದ್ರು. ಅವನಿಗೆ ದುಡ್ಡು ಕೊಟ್ಟು ಹ್ಯಾಂಡ್ ಬಿಲ್ ಹಂಚೊಕೆ ಹೇಳ್ತಾರೆ. ಇದೆಲ್ಲ ಜೋಶಿಯ ದುರ್ಬುದ್ದಿ. ಯಡಿಯೂರಪ್ಪ ಜೈಲಿಗೆ ಹೋಗಲು ಜೋಶಿಯೇ ಕಾರಣ ಎಂದು ಭಾವುಕರಾಗಿಯೆ ವಿನಯ ಕುಲಕರ್ಣಿ ಮಾತನಾಡಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv