ಜೋಶಿ ಗೋಮುಖ ವ್ಯಾಘ್ರ ಇದ್ದಂತೆ :ವಿನಯ್ ಕುಲಕರ್ಣಿ ವಾಗ್ದಾಳಿ

ಧಾರವಾಡ: ಜೋಶಿ ಗೋಮುಖ ವ್ಯಾಘ್ರ ಇದ್ದಂತೆ. ಸಾಮಾಜಿಕ ಜಾಲತಾಣದಲ್ಲಿ ಜೋಶಿ ತಂಡ ನನ್ನ ವಿರುದ್ಧ ಪೋಸ್ಟ್ ಅಪಲೋಡ್ ಮಾಡೋದನ್ನ ನೋಡಿದ್ರೆ ರಕ್ತ ಕುದಿಯುತ್ತೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಹೇಳಿದ್ದಾರೆ. ಧಾರವಾಡದಲ್ಲಿ ಪ್ರಚಾರ ಕೈಗೊಂಡು, ಈ ವೇಳೆ ಮಾತನಾಡಿದ ಅವರು, ಜೋಷಿ ತಂಡ ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಹಾಕಿದ ಪೋಸ್ಟ್‌ ನೋಡಿದ್ರೆ ರಕ್ತ ಕುದಿಯುತ್ತೆ  ಅವಳಿ ನಗರದಲ್ಲಿ ಬೆಲ್ಲದ್ ಆ್ಯಂಡ್ ಕಂಪನಿ, ಶೆಟ್ಟರ್ ಆ್ಯಂಡ್ ಕಂಪನಿ, ಜೋಶಿ ಆ್ಯಂಡ್ ಕಂಪನಿ ಇವೆ. ನಾವ್ಯಾರೂ ಆಸ್ತಿ ಮಾಡಿಲ್ಲ. ಜಿಲ್ಲೆ ಶಾಂತಿಯಿಂದಿರೋಕೆ ಜೋಶಿ ಬಿಡೋದಿಲ್ಲ ಎಂದು ವಿನಯ್ ಕುಲಕರ್ಣಿ ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಪ್ರಚಾರ ಕೈಗೊಂಡು, ಈ ವೇಳೆ ಮಾತನಾಡಿದ ಎಚ್.ಕೆ.ಪಾಟೀಲ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ಗೆ ಚುನಾವಣಾ ಆಯೋಗ ಉತ್ತಮ ಶಿಕ್ಷೆ ನೀಡಿದೆ ಅವರಿಗೆ ಕಪಾಳ ಮೋಕ್ಷ ಮಾಡಿದಂತಾಗಿದೆಯ. ನಾವು ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಧಾರವಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಒಲುವು ಹೆಚ್ಚಿದೆ ಎಂದು ಎಚ್‌.ಕೆ ಪಾಟೀಲ್ ಹೇಳಿದರು.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv