ಜೋಶಿ ಮನೆಯನ್ನು ಇಬ್ಭಾಗ ಮಾಡುವ ಕುತಂತ್ರಿ -ವಿನಯ್ ಕುಲಕರ್ಣಿ

ಧಾರವಾಡ: ಪ್ರಹ್ಲಾದ್ ಜೋಶಿ ಮನೆಯನ್ನು ಇಬ್ಭಾಗ ಮಾಡುವಂಥ ಕುತಂತ್ರಿ. ಮಾಜಿ ಜಿ.ಪಂ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ನಾನು ಆರೋಪಿಯೂ ಅಲ್ಲ. ಎಫ್‌ಐಆರ್‌, ಚಾರ್ಜ್‌ಶೀಟ್‌ನಲ್ಲಿಯೂ ನನ್ನ ಹೆಸರೂ ಇಲ್ಲ.  ಈಗ ಚುನಾವಣೆ ಬಂದಿದೆ, ಹೀಗಾಗಿ ಪ್ರಹ್ಲಾದ್ ಜೋಶಿ ಇಂಥ ಕುತಂತ್ರ ಮಾಡುತ್ತಿದ್ದಾರೆ ಎಂದು ಧಾರವಾಡ ಕಾಂಗ್ರೆಸ್​ ಅಭ್ಯರ್ಥಿ ವಿನಯ್ ಕುಲಕರ್ಣಿ ಹೇಳಿದ್ದಾರೆ.

ಮಾಜಿ ಜಿಪಂ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯನಾಶ ಆರೋಪದಡಿ ಕೇಸು ದಾಖಲಿಸಲು  ನಿನ್ನೆ ಧಾರವಾಡ ಜೆಎಂಎಫ್​ಸಿ ಕೋರ್ಟ್ ಸೂಚನೆ ನೀಡಿದೆ. ಈ ಬಗ್ಗೆ ವಿನಯ್ ಕುಲಕರ್ಣಿ ಪ್ರತಿಕ್ರಿಯಿಸಿ, ನ್ಯಾಯಾಂಗದ ಬಗ್ಗೆ ನನಗೆ ಗೌರವ ಇದೆ. ಅದು ಯಾವತ್ತೋ ಆಗಿರೋ ಯೋಗೇಶ್ ಗೌಡ ಕೊಲೆ ಕೇಸ್ ಈಗ ಚುನಾವಣೆಯಲ್ಲಿಯೇ ಮುನ್ನೆಲೆಗೆ ಬಂದಿದ್ದು ಏಕೆ..?  ಇಷ್ಟು ದಿನ ಇವರು ಮಲಗಿಕೊಂಡಿದ್ದರೇನು? ಕೇಸ್ ಆಗಿ 3 ವರ್ಷ ಆಗಿದೆ. ಇದೆಲ್ಲವೂ ಪ್ರಹ್ಲಾದ ಜೋಶಿ ಕುತಂತ್ರ. ಜನ ಇದನ್ನೆಲ್ಲ ನೋಡುತ್ತಿದ್ದಾರೆ. ಆ ಕೇಸ್‌ನಲ್ಲಿ 62 ಸಾಕ್ಷಿಗಳು ಇದ್ದವು. ಅದರಲ್ಲಿ 59 ಸಾಕ್ಷಿಗಳು ಮುಗಿದಿವೆ.  ಕೇಸ್ ಹಾಕಿರೋ ಗುರುನಾಥಗೌಡ ಯಾರ ಜೊತೆ ಇರ್ತಾರೆ? ಅವರು ಪ್ರಹ್ಲಾದ್​ ಜೋಶಿ ಜೊತೆಯೇ ಇರ್ತಾರೆ. ಹಾಗಾದ್ರೆ ಯಾರು ಈ ಕೇಸ್ ಮಾಡಿದಂತಾಯ್ತು? ಎಂದು ಅವರು ಪ್ರಶಿಸಿದರು. ಇನ್ನು ಧಾರವಾಡದಲ್ಲಿ ಏನು ನಡೆದರೂ ವಿನಯ ಕುಲಕರ್ಣಿ ಮಾತ್ರ ಕಾಣುತ್ತಾರೆ ಎಂದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv