ಸಂವಿಧಾನ ಬದಲಾವಣೆಯ ಭಾವನೆಗಳು ಬಿಜೆಪಿಯಲ್ಲಿ ಇವೆ: ವಿನಯ್ ಕುಲಕರ್ಣಿ

ಹುಬ್ಬಳ್ಳಿ: ದೇಶದ ಸಂವಿಧಾನವನ್ನು ರದ್ದು ಮಾಡುವ ಉದ್ದೇಶ ಬಿಜೆಪಿ ಹೊಂದಿದೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿನಯ್ ಕುಲಕರ್ಣಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಒಂದು ಹೇಳಿಕೆ, ಮಾತು ಹೋರಗೆ ಬರಬೇಕಾದ್ದರೆ ಅದೂ ಆತ್ಮದಿಂದ ಬರುವಂತಹದು. ಇಲ್ಲವಾದಲ್ಲಿ ಪಕ್ಷದ ಮುಖಂಡರು ಕಲಿಸುವುದನ್ನು ಹೇಳಬೇಕಾಗುತ್ತೆ. ಸಂವಿಧಾನ ಬದಲಾವಣೆಯ ಭಾವನೆಗಳು ಬಿಜೆಪಿಯಲ್ಲಿ ಇವೆ. ಅದಕ್ಕೆ ಸಾಕ್ಷಿ ಅನಂತಕುಮಾರ ಹೆಗಡೆ ಎಂದು ವಿನಯ್ ಕುಲಕರ್ಣಿ ಹೇಿಳಿದರು. ದೇಶದಲ್ಲಿ ಸಮಾನತೆ ಕಾಯ್ದುಕೊಳ್ಳುವಲ್ಲಿ ಸಂವಿಧಾನ ತುಂಬಾ ಪ್ರಾಮುಖ್ಯತೆ ವಹಿಸಿದೆ. ದೇಶಕ್ಕೆ ಅಂಬೇಡ್ಕರ್‌ ಸಂವಿಧಾನ ನೀಡುವ ಮೂಲಕ ದೊಡ್ಡ ಕೊಡುಗೆಯನ್ನು ನಮಗೆ ನೀಡಿದ್ದಾರೆ ಅವರ ಆಶಯ, ವಿಚಾರಧಾರೆಗಳನ್ನು ಫಾಲಿಸಿಕೊಂಡು ಹೋಗಬೇಕಾಗಿದೆ ಎಂದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv