’ಪ್ರಹ್ಲಾದ್ ಜೋಶಿ ಗಾಳಿಯಲ್ಲಿ ಆರಿಸಿ ಬಂದವರು, ಈ ಬಾರಿ ಬಿಸಿ ಹಚ್ಚುತ್ತೇವೆ’

ಧಾರವಾಡ: ಪ್ರಹ್ಲಾದ್ ಜೋಶಿ ಅವರು ಗಾಳಿಯಲ್ಲಿ ಆರಿಸಿ ಬಂದವರು, ಈ ಬಾರಿ ಬಿಸಿ ಹಚ್ಚುತ್ತೇವೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿನಯ್ ಕುಲಕರ್ಣಿ ಕಿಡಿಕಾರಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿನಯ್ ಕುಲಕರ್ಣಿ, ನನಗೆ ವಿಳಂಬವಾಗಿ ಬಿ. ಫಾರಂ ಸಿಕ್ಕಿದೆ. ನಮಗೆಲ್ಲ ಸಹಜವಾಗಿಯೇ ಆತಂಕ ಮೂಡಿತ್ತು. ಈಗ ಅಧಿಕೃತವಾಗಿ ನಾನು ಪಕ್ಷದ ಅಭ್ಯರ್ಥಿಯಾಗಿದ್ದೇನೆ. ನನಗೆ ಸಮಯ ಕಡಿಮೆ ಇರುವುದರಿಂದ ಇಂಥ ಸಂದರ್ಭದಲ್ಲಿ ಚುನಾವಣೆ ಮಾಡುವುದು ಸ್ವಲ್ಪ ಕಷ್ಟ ಎಂದರು.  ಕೆಲ ದಿನಗಳಿಂದ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರ ಜೊತೆ ಮಾತನಾಡಿ ಪ್ರಚಾರ ಕಾರ್ಯ ಆರಂಭ ಮಾಡಿದ್ದೇನೆ. ನಮ್ಮ ಕಾರ್ಯಕರ್ತರ ಪಡೆ ದೊಡ್ಡದಾಗಿದೆ, ಜೆಡಿಎಸ್ ನಮ್ಮ ಜೊತೆ ಇದೆ. ಹೊರಟ್ಟಿಯಂತಹ ದೊಡ್ಡ ನಾಯಕರು ನಮ್ಮ ಜೊತೆ ಇದ್ದಾರೆ ಎಂದರು.

ದಿವಂಗತ ಮಾಜಿ ಸಚಿವ ಶಿವಳ್ಳಿ ನಿಧನದ ನಂತರ ಆತಂಕಗೊಂಡಿದ್ದೇವೆ. ಆದರೆ ಕಾರ್ಯಕರ್ತರು ಶಿವಳ್ಳಿ ರೀತಿ ಕೆಲಸ ಮಾಡುತ್ತೇವೆ ಅಂತ ಹೇಳಿದ್ದಾರೆ. ನಿನ್ನೆ ಕುಂದಗೋಳ ಕ್ಷೇತ್ರದಲ್ಲಿ ಮೀಟಿಂಗ್ ಮಾಡಿದ್ದೇವೆ. ಹಲವಾರು ಜೆಡಿಎಸ್ ನಾಯಕರು ನಮ್ಮ ಜೊತೆ ಇದ್ದಾರೆ ಅಂತಾ ಇದೇ ವೇಳೆ ವಿನಯ್ ಕುಲಕರ್ಣಿ ಹೇಳಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv