ಧೈರ್ಯ ಇದ್ರೆ ಮೋದಿ ಹೆಸರು ಹೇಳದೇ ಜೋಶಿ ಚುನಾವಣೆ ಎದುರಿಸಲಿ: ವಿನಯ್ ಕುಲಕರ್ಣಿ

ಹುಬ್ಬಳ್ಳಿ: ಧಾರವಾಡದಲ್ಲಿ ಮೋದಿ ಹೆಸರು ಬೇಡ, ವಿನಯ್ ಕುಲಕರ್ಣಿ v/s ಸಂಸದ ಪ್ರಹ್ಲಾದ್ ಜೋಶಿ ಎಂದು ಚುನಾವಣೆ ಮಾಡೋಕ್ಕೆ ಜೋಶಿಯವರು ರೆಡಿ ಇದ್ದಾರೋ..? ಅಂತಾ ಮೈತ್ರಿ ಅಭ್ಯರ್ಥಿ ವಿನಯ‌ ಕುಲಕರ್ಣಿ ಸವಾಲ್ ಸಂಸದ ಪ್ರಹ್ಲಾದ್ ಜೋಶಿಗೆ ಸವಾಲೆಸೆದಿದ್ದಾರೆ.

ನಗರದ ಕಾಂಗ್ರೆಸ್​ ಪಕ್ಷದ ಕಚೇರಿಯಲ್ಲಿ ಚುನಾವಣೆ ಪ್ರಣಾಳಿಕೆ ಬಿಡುಗಡೆಯಲ್ಲಿ ಭಾಗವಹಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ವಿನಯ‌ ಕುಲಕರ್ಣಿ,  ಪ್ರಧಾನಿ ಮೋದಿ ಹೆಸರು ಬಿಟ್ಟುಬಿಡೋಣ. ನನ್ನ ವಿರುದ್ದ ಪ್ರಹ್ಲಾದ್ ಜೋಶಿ ಶಕ್ತಿ ಇದ್ದರೆ ಸ್ವಂತ ಹೆಸರು ಹೇಳಿಕೊಂಡು ಚುನಾವಣೆ ಎದುರಿಸಲಿ. ಈಗಗಾಗಲೇ ಜೋಶಿ 15 ವರ್ಷ ಸಂಸದರಾಗಿ ಕ್ಷೇತ್ರಕ್ಕೆ ಏನು ಮಾಡಿದ್ದಾರೆ..? ಅವರು ಯಾಕೆ ಬೇರೆಯವರ ಹೆಸರಲ್ಲಿ ಮತ ಕೇಳುತ್ತಾರೆ. ಹಾಗಾದ್ರೆ ಅವರೇನು ಧಾರವಾಡ ಕ್ಷೇತ್ರಕ್ಕೆ ಕೆಲಸ ಮಾಡಿಯೇ ಇಲ್ವಾ..? ಎಂದು ವ್ಯಂಗವಾಡಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv