ಧಾರವಾಡ ಟಿಕೆಟ್‌ಗಾಗಿ ವಿನಯ್ ಕುಲಕರ್ಣಿ, ಶಾಖಿರ್ ಸನದಿ ನಡುವೆ ಫೈಟ್

ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್ ವಿಚಾರ ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಘೋಷಣೆಯಾಗಿಲ್ಲ. ಟಿಕೆಟ್‌ಗಾಗಿ ವಿನಯ್ ಕುಲಕರ್ಣಿ ಹಾಗೂ ಶಾಖಿರ್ ಸನದಿ ನಡುವೆ ಫೈಟ್ ಏರ್ಪಟ್ಟಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರಾದ ಮಾಜಿ‌ ಸಚಿವ ವಿನಯ್ ಕುಲಕರ್ಣಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದ್ರೆ ಟಿಕೆಟ್ ಸಿಗೋ‌ ನಿರೀಕ್ಷೆಯಲ್ಲಿದ್ದ ವಿನಯ್ ಕುಲಕರ್ಣಿಗೆ ಮೊದಲ ಪಟ್ಟಿಯಲ್ಲಿ ನಿರಾಸೆಯಾಗಿದೆ. ಮಾಜಿ ಸಚಿವ ಐ.ಜಿ ಸನದಿ ಪುತ್ರ ಶಾಖಿರ್ ಸನದಿ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ನಡುವೆ ಟಿಕೆಟ್​​ಗಾಗಿ ಪೈಪೋಟಿ ಏರ್ಪಟ್ಟಿದ್ದು, ಎರಡನೇ ಪಟ್ಟಿಯಲ್ಲಿಯಾದ್ರೂ ಟಿಕೆಟ್ ಸಿಗಬಹುದು ಎಂದು ಆಕಾಂಕ್ಷಿಗಳು ನಿರೀಕ್ಷೆಯಲ್ಲಿ ಇದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv