ರೈತ ಹೋರಾಟ ಸಮಿತಿಯಿಂದ ವಿನಯ್​ ಕುಲಕರ್ಣಿಗೆ ಬೆಂಬಲ, ಹೆಚ್ಚಿದ ಕಾಂಗ್ರೆಸ್​​​​ ಬಲ..!

ಧಾರವಾಡ: ಉತ್ತರ ಕರ್ನಾಟಕದ ರೈತರ ಯಾವುದೇ ಕಷ್ಟಗಳಿಗೆ ಸ್ಥಳೀಯ ಸಂಸದರಾಗಿದ್ದ ಪ್ರಲ್ಹಾದ ಜೋಶಿಯವರು ಸ್ಪಂಧಿಸಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ಧಾರವಾಡ ಲೋಕಸಭಾ ಚುನಾವಣೆಯಲ್ಲಿ ರೈತ ಹೋರಾಟ ಸಮಿತಿಯಿಂದ ಕಾಂಗ್ರೆಸ್​​​​ಗೆ ಬೆಂಬಲ ನೀಡಲಾಗುತ್ತದೆ ಎಂದು ರೈತ ಹೋರಾಟ ಸಮಿತಿಯ ಮುಖಂಡ ಲೋಕನಾಥ ಹೆಬಸೂರ ತಿಳಿಸಿದರು. ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ರೈತರ ಹೋರಾಟ ಸುಮಾರು ಮೂರು ದಶಕಗಳಿಂದ ಜಾರಿಯಲ್ಲಿರುವ ಮಹದಾಯಿ ಕಳಸಾ ಬಂಡೂರಿ ಯೋಜನೆ ಕುರಿತು ಯಾವುದೇ ಕಿಂಚಿತ್ತೂ ಕಾಳಜಿ ತೋರದಿರುವುದು ರೈತ ಒಕ್ಕೂಟದ ಅಸಮಾಧಾನಕ್ಕೆ ಕಾರಣವಾಗಿದೆ ಎಂದರು. ಜೋಶಿಯವರ ಮೇಲೆ ತುಂಬಾ ಆಶಾ ಭಾವನೆಯನ್ನಿಟ್ಟುಕೊಂಡು ಅವರನ್ನು ಸಂಸದರನ್ನಾಗಿ ಮಾಡಿದ್ದೇವೆ, ಆದರೇ ಅವರು ಸತತ ಮೂರು ಬಾರಿ ಸಂಸದರಾಗಿ ಆಯ್ಕೆಯಾದರು ಕೂಡ ರೈತಪರ ಜೋಶಿ ಹಾಗೂ ಕೇಂದ್ರ ಸರ್ಕಾರ ಕಾಳಜಿ ಇಲ್ಲ ತೋರಿಲ್ಲ ಎಂದು ಆರೋಪಿಸಿದರು. ಉತ್ತರ ಕರ್ನಾಟಕದ ಹಾವೇರಿ, ಬೆಳಗಾವಿ, ಬಾಗಲಕೋಟೆ, ಧಾರವಾಡದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವ ಕುರಿತು ರೈತ ಹೋರಾಟದ ಒಕ್ಕೂಟ ಸಮಿತಿ ತಿರ್ಮಾನ ಮಾಡಿದ್ದೇವೆ. ಈಗಾಗಲೇ ಕರಪತ್ರ ಹಂಚುವ ಮೂಲಕ ಬಿಜೆಪಿ ಅಭ್ಯರ್ಥಿ ಸೋಲಿಸಲು ಪ್ರಯತ್ನ ಮಾಡುತ್ತಿದ್ದೇವೆ ಈ ನಿಟ್ಟಿನಲ್ಲಿ ರೈತರ ತಾಕತ್ತನ್ನು ಭಾರತೀಯ ಜನತಾ ಪಾರ್ಟಿಗೆ ತೋರಿಸಬೇಕಾಗಿದೆ ಎಂದು ಅವರು ಹೇಳಿದರು. ನವಲಗುಂದದಲ್ಲಿ ರೈತರ ಮೇಲೆ ಲಾಟಿ ಚಾರ್ಜ್ ಮಾಡಲು ಬಿಜೆಪಿಯವರೇ ಮೂಲ ಕಾರಣರಾಗಿದ್ದಾರೆ. ಗೂಂಡಾಗಳನ್ನು ಕಳಿಸಿ ಗಲಾಟೆ ಮಾಡಲು ಹಚ್ಚಿ ರೈತ ಹೋರಾಟಕ್ಕೆ ಚ್ಯುತಿ ತಂದಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv