ಧಾರವಾಡ ಕ್ಷೇತ್ರದಿಂದ ಗುರುವಾರ ವಿನಯ್​ ಕುಲಕರ್ಣಿ ನಾಮಪತ್ರ ಸಲ್ಲಿಕೆ

ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದಿಂದ ಗುರುವಾರ ನಾನು ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಅಂತಾ ಮಾಜಿ ಸಚಿವ ವಿನಯ್​ ಕುಲಕರ್ಣಿ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ನಿಂದ ಅಧಿಕೃತವಾಗಿ ಬಿ ಫಾರ್ಮ್ ನನಗೆ ಸಿಕ್ಕಿಲ್ಲ. ಆದ್ರೆ ದಾಖಲೆಗಳನ್ನು ತಯಾರಿ ಮಾಡಿಟ್ಟುಕೊಳ್ಳುವಂತೆ ಹೇಳಿದ್ದಾರೆ. ಕಳೆದ ಸಲ ನನಗೆ ಟಿಕೆಟ್ ಸಿಗುತ್ತೇ ಅನ್ನೋದು ಗೊತ್ತಿರಲಿಲ್ಲ. ಸಿದ್ದರಾಮಯ್ಯನವರೇ ಕರೆದು ನೀನೇ ಅಭ್ಯರ್ಥಿ ಅಂತಾ ಹೇಳಿದ್ರು. ಆಗ ಕೂಡ ನಾನು ಕೊನೇ ದಿನವೇ ನಾಮಪತ್ರ ಸಲ್ಲಿಸಿದ್ದೆ. ಪಕ್ಷ ಟಿಕೆಟ್ ಕೊಟ್ಟರೇ ಬಿ ಫಾರ್ಮ್ ಸಲ್ಲಿಸುವೆ. ಇಲ್ಲದಿದ್ದರೆ ನಾಮಪತ್ರ ವಾಪಸ್ ಪಡೆಯುವೆ ಅಂತಾ ಹೇಳಿದರು. ಇದೇ ವೇಳೆ, ಬಿಜೆಪಿಯಲ್ಲಿ ಯಾವುದೇ ಸಮಾನತೆ ಇಲ್ಲ. ನಮ್ಮ‌ ತತ್ವ ಸಿದ್ದಾಂತಕ್ಕೂ ಅವರಿಗೂ ವ್ಯತ್ಯಾಸವಿದೆ. ಬಿಜೆಪಿ ಒಬ್ಬರಿಗೂ ಕುರುಬ ಸಮಾಜದವರಿಗೆ ಟಿಕೆಟ್ ಕೊಟ್ಟಿಲ್ಲ. ಈ ಹಿಂದೆ 9 ಜನ ಸಂಸದರಿದ್ದರೂ ಮಂತ್ರಿ ಸ್ಥಾನ ಕೊಡಲಿಲ್ಲ. ಲಿಂಗಾಯತರಿಗೆ ಬಿಜೆಪಿ ಯಾವುದೇ ಪ್ರಾತಿನಿಧ್ಯ ಕೊಡೋದೇ ಇಲ್ಲ. ಆದ್ರೆ ಆ ಸಮಾನತೆ ಉಳಿದಿದ್ದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಅಂತಾ ಹೇಳಿದರು.

ಕ್ಷೇತ್ರದಲ್ಲಿ ಪ್ರಹ್ಲಾದ್ ಜೋಶಿಯವರಿಗೆ ಭಯ ಇದೆ. ಅವರು ರೈತರ ಪರ ಇಲ್ಲ. ಮಹದಾಯಿ ಹೋರಾಟವನ್ನ ಹತ್ತಿಕ್ಕಿದವರೇ ಪ್ರಹ್ಲಾದ್ ಜೋಶಿ ಅಂತಾ ವಿನಯ್​ ಕುಲಕರ್ಣಿ ಆರೋಪಿಸಿದರು.