ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ವೇಳೆ ರಂಭಾಪುರಿ ಶ್ರೀ ಟೀಕೆ, ಈಗ ಗೆಲುವಿಗಾಗಿ ಮೊರೆ..!

ಧಾರವಾಡ: ಲಿಂಗಾಯತ ಹೋರಾಟ ಸಂದರ್ಭದಲ್ಲಿ ವೀರಶೈವ ಜಗದ್ಗುರುಗಳ ವಿರುದ್ಧ ಸಿಡಿದೆದ್ದಿದ್ದ ಕೈ ಅಭ್ಯರ್ಥಿ ವಿನಯ್ ಕುಲಕರ್ಣಿ ಇದೀಗ ವೀರಶೈವ ಜಗದ್ಗುರುಗಳಿಗೆ ಮೊರೆ ಹೋಗಿದ್ದಾರೆ. ರಂಭಾಪುರೀ‌ ಜಗದ್ಗುರುಗಳಿಗೆ ವಿನಯ್ ಕುಲಕರ್ಣಿ ಮೊರೆ ಹೋಗಿದ್ದು, ತಡಸದಲ್ಲಿನ ‌ಗಾಯತ್ರಿ ತಪೋಭೂಮಿಯಲ್ಲಿ ರಂಭಾಪುರಿ ಶ್ರೀಗಳ ದರ್ಶನ ಪಡೆದಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಮಾಡಿದ್ರೂ ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದ ವಿನಯ್ ಕುಲಕರ್ಣಿ, ಸದ್ಯ ಲೋಕಸಭೆ ಚುನಾವಣೆ ಗೆಲ್ಲಲು ಪಣ ತೊಟ್ಟಿದ್ದು ಪ್ರತ್ಯೇಕ ಲಿಂಗಾಯತ ಧರ್ಮ ವಿಷಯ ಕೈ ಬಿಟ್ಟು, ವೀರಶೈವ ಜಗದ್ಗುರುಗಳಲ್ಲಿ ಗೆಲುವಿಗಾಗಿ ಪ್ರಾರ್ಥನೆ ಮಾಡಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ವೇಳೆ ಶ್ರೀಗಳ ವಿರುದ್ಧ ಮಾತನಾಡಿದ್ದರೂ ಕೂಡ ಯಾವುದನ್ನೂ ಮನಸ್ಸನಲ್ಲಿಟ್ಟುಕೊಳ್ಳದೆ ರಂಭಾಪುರಿ ‌ಶ್ರೀಗಳು ಆಶೀರ್ವಾದ ಮಾಡಿದ್ದಾರೆ ಎಂದು ತಿಳಿದು ಬಂದಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv