ರಾಮನ ಇಚ್ಛೆಯಂತೆ ಇನ್ನೂ 8 ವರ್ಷಗಳ ಕಾಲ ಪ್ರಧಾನಿ ಆಗಿರ್ತಾರೆ ಮೋದಿ-ವಿನಯ್ ಗುರೂಜಿ

ಚಿಕ್ಕಮಗಳೂರು: ದತ್ತಾತ್ರೇಯರ ಸಂಪೂರ್ಣ ಅನುಗ್ರಹ ನಿಮ್ಮದಾಗಲಿ ಅಂತಾ ಪ್ರಧಾನಿ ಮೋದಿಗೆ ಹಾರೈಸಿ, ರಾಮನ ಬಿಲ್ಲು ಬಾಣದ ಜೊತೆ ಪೇಟ ಮತ್ತು ಅಕ್ಷತೆಯನ್ನ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ದತ್ತಾತ್ರೇಯ ಪೀಠಾಧೀಶರಾದ ಶ್ರೀ ವಿನಯ ಗುರೂಜಿ ಕಳುಹಿಸಿಕೊಟ್ಟಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ವಿನಯ್ ಅವದೂತರು, ರಾಮಾಯಣದಲ್ಲಿ ರಾವಣನ ಸಂಹಾರಕ್ಕೆ ಶಿವನಿಂದ ಶಿವನ ಧನಸ್ಸು ಶಿವನೇ ಹೇಗೆ ಕೊಡಲ್ಪಡುತ್ತಾನೋ.. ಹಾಗೆ ಭ್ರಷ್ಟಾಚಾರ ತುಂಬಿದ ರಾಜಕೀಯ ವ್ಯವಸ್ಥೆಯ ಶುದ್ಧೀಕರಣಕ್ಕಾಗಿ ರಾಮನವಮಿಯ ದಿನ 8 ವರ್ಷಗಳಿಂದ ಪೂಜೆ ಮಾಡಲಾಗುತ್ತಿರುವ ರಾಮನ ಕೈಯಲ್ಲಿರುವ ಬಿಲ್ಲು ಬಾಣವನ್ನು ಮೋದಿಗೆ ಕಳುಹಿಸಿಕೊಡಲಾಗಿದೆ. 8 ವರ್ಷಗಳ ಹಿಂದೆಯೇ ದೇಶವನ್ನು ಒಬ್ಬ ಯೋಗಿ ಆಳುತ್ತಾನೆ ಎಂದು ಭವಿಷ್ಯ ನುಡಿದಿದ್ದೆ. ಇವತ್ತಿನಿಂದ ಇನ್ನೂ 8 ವರ್ಷಗಳ ಕಾಲ ರಾಮನ ಇಚ್ಛೆಯಂತೆ ಮೋದಿ ಪರ್ವ ನಡೆಯಲಿದೆ. ಈಗ ಆ ಬಿಲ್ಲು ಬಾಣವನ್ನ ನಮ್ಮ ಆಶ್ರಮದ ಟ್ರಸ್ಟಿಗಳಾದ ಬೇಳೂರು ರಾಘವೇಂದ್ರ ಶೆಟ್ಟಿ ಇವರ ಬಳಿ ಕಳುಹಿಸಿಕೊಟ್ಟಿದ್ದೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ದೇವೇಗೌಡ ದಂಪತಿಯಿಂದ ಪಾದ ಪೂಜೆ, ತಲೆ ಬಾಗಿ ನಮಸ್ಕಾರ..!

 

ಕುಮಾರಸ್ವಾಮಿ ಸಿಎಂ ಆಗ್ತಾರೆ ಅಂತ ಭವಿಷ್ಯ ನುಡಿದಿದ್ದ ಗುರೂಜಿ

ಈ ಹಿಂದಿನ ಚುನಾವಣೆ ವೇಳೆ ಕೂಡ ವಿನಯ್​ ಗುರೂಜಿ ಹೆಚ್​​.ಡಿ ಕುಮಾರಸ್ವಾಮಿ ಸಿಎಂ ಆಗ್ತಾರೆ ಅಂತ ಭವಿಷ್ಯ ನುಡಿದಿದ್ದರು. ಆದ್ರೆ, ಅಂದಿನ ರಾಜಕೀಯ ಲೆಕ್ಕಾಚಾರದಲ್ಲಿ ಈ ಮಾತನ್ನು ಹೆಚ್ಚಿನವರು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದ್ರೆ, ದೇವೇಗೌಡರು ಮಾತ್ರ ವಿನಯ್​ ಗುರೂಜಿ ಅವರನ್ನು ಮನೆಗೆ ಕರೆಸಿ ಪಾದಪೂಜೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

 

 


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv