ಕಾಡಾನೆಗಳ ಹಿಂಡು ಕಂಡು ಗ್ರಾಮಸ್ಥರಲ್ಲಿ ನಡುಕ..

ಕೊಡಗು: ಜಿಲ್ಲೆಯಲ್ಲಿ ಕಾಡಾನೆಗಳ ಹಿಂಡು ಕಾಣಿಸುಕೊಳ್ಳುವುದು, ತೋಟಗಳನ್ನು ನಾಶ ಮಾಡುವುದು ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಆಹಾರವನ್ನು ಅರಸಿ ಬಂದ  ಕಾಡಾನೆಗಳು ರೈತರ ತೋಟಕ್ಕೆ ನುಗ್ಗಿ ದಾಂಧಲೆ ನಡೆಸುತ್ತಲೇ ಇವೆ. ಆದ್ರೆ ಕಾಡಾನೆಗಳನ್ನು ಮರಳಿ ಕಾಡಿಗಟ್ಟುವುದು ಅರಣ್ಯ ಇಲಾಖೆಗೆ  ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇಂದು ಕೂಡಾ ಜಿಲ್ಲೆಯ ರುದ್ರಬೀಡು ಗ್ರಾಮದಲ್ಲಿ ಕಾಡಾನೆ ಹಿಂಡು ಬೀಡುಬಿಟ್ಟಿದ್ದು, ಆಲೆಮಾಡ ಹರೀಶ್ ಎಂಬುವರಿಗೆ ಸೇರಿದ ಎರಡು ಎಕರೆ ಕಾಫಿ ತೋಟದಲ್ಲಿ ಗಿಡಗಳಿಗೆ ಹಾನಿ ಮಾಡಿವೆ. ಗ್ರಾಮದ ಕಾಫಿ ತೋಟ, ಭತ್ತದ ಗದ್ದೆಗಳಲ್ಲಿ ಓಡಾಡುತ್ತಿರುವ ಆನೆಗಳ ಹಿಂಡು ಕಂಡು ಜನರು ಭಯಭೀತರಾಗಿದ್ದಾರೆ. ಆನೆಗಳನ್ನು ಕಾಡಿಗಟ್ಟಲು ಱಪಿಡ್ ರೆಸ್ಪಾನ್ಸ್ ಟೀಂ ಶತಾತಗತಾಯ ಯತ್ನ ನಡಿಸಿದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv