ಮೂಲ ಸೌಕರ್ಯಕ್ಕಾಗಿ ಮತದಾನ‌ ಬಹಿಷ್ಕಾರ ಮಾಡಿ, ವಾಪಾಸ್ ಪಡೆದ ಗ್ರಾಮಸ್ಥರು

ಮೈಸೂರು: ಇಂದು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೆ.ಆರ್.ನಗರ ತಾ. ಚಿಬುಕಹಳ್ಳಿ ಗ್ರಾಮಸ್ಥರು ಬೆಳಗ್ಗೆ 12 ಗಂಟೆ ವೇಳೆಗೆ  ಮತದಾನ ಬಹಿಷ್ಕಾರ ಮಾಡಿದ್ದರು. ನಂತರ ಜನಪ್ರತಿನಿಧಿಗಳ ಭರವಸೆ‌ಯ ಮೇರೆಗೆ‌ ಮತ್ತೆ ಗ್ರಾಮಸ್ಥರು ಮತದಾನ ಮಾಡಲು ಮುಂದಾಗಿದ್ದಾರೆ. ಚಿಬುಕನಹಳ್ಳಿ ಗ್ರಾಮದಲ್ಲಿ 628 ಮತದಾರರಿದ್ದಾರೆ. ಇದೀಗ ನಿಧಾನಗತಿಯಲ್ಲಿ‌ ಗ್ರಾಮದಲ್ಲಿ ಮತ್ತೆ ಮೊದಲಿನಂತೆ ಮತದಾನ ಶುರುವಾಗಿದೆ. ಚಿಬುಕನಹಳ್ಳಿ ಗ್ರಾಮ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸೇರಿದೆ.


 Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv