ಮರಳು ಪೂರೈಕೆಗೆ ಆಗ್ರಹಿಸಿ ಬಂದ್‌ಗೆ ಕರೆ

ದಾವಣಗೆರೆ: ಕಡಿಮೆ ದರದಲ್ಲಿ ಮರಳು ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ಇಂದು ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ನೇತೃತ್ವದಲ್ಲಿ ಬಂದ್ ಗೆ ಕರೆ ನೀಡಲಾಗಿದೆ. ನ್ಯಾಮತಿ, ಸವಳಂಗ, ಚೀಲೂರು, ಸುರಹೊನ್ನೆ ಗ್ರಾಮಗಳು ಬಂದ್‌ಗೆ ಬೆಂಬಲ ನೀಡಿವೆ. ಈ ಹಿನ್ನೆಲೆಯಲ್ಲಿ ಜನರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನ ಬಂದ್‌ ಮಾಡಿ ಬೆಂಬಲ ನೀಡಿದ್ದು, ನ್ಯಾಮತಿ ತಾಲೂಕಿನ ಚಿಲೂರು ಗ್ರಾಮದಲ್ಲಿ  ಪ್ರತಿಭಟನಾಕಾರರು ಟೈರ್‌ಗೆ ಬೆಂಕಿ ಹಚ್ಚಿ, ಸಮ್ಮಿಶ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು.

ಇನ್ನು ಸೋಮವಾರ ಹೊನ್ನಾಳಿ ತಾಲೂಕು ಬಂದ್ ಗೆ ಕರೆ ನೀಡಲಾಗಿದೆ. ಮರಳಿನ ಸಮಸ್ಯೆ ನೀಗಿಸುವುದು, ಹೊನ್ನಾಳಿ ತಾಲೂಕುಗಳನ್ನ ಬರ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಕೈಗೊಳ್ಳಲಾಗಿದೆ. ಇತ್ತೀಚೆಗೆ ರೇಣುಕಾಚಾರ್ಯ ನದಿಗೆ ಇಳಿದು ತಾವೇ ಮರಳು ತುಂಬಿದ್ದರು. ಮೊನ್ನೆಯಷ್ಟೆ 2 ದಿನ ಹೊನ್ನಾಳಿಯಲ್ಲಿ ರೇಣುಕಾಚಾರ್ಯ  ಉಪವಾಸ ಹಾಗೂ ಧರಣಿ ಸತ್ಯಾಗ್ರಹ ನಡೆಸಿದ್ದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv