ಜಮೀನು ಕಬಳಿಕೆ, ಹೆಚ್.ಡಿ. ಕೋಟೆಯ ಸವ್ವೆ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ

ಮೈಸೂರು: ಹೊರ ರಾಜ್ಯದ ವ್ಯಕ್ತಿಯೊಬ್ಬರು ಜಮೀನು ಕಬಳಿದ್ದಾರೆ ಎಂದು ಆರೋಪಿಸಿ, ಹೆಚ್.ಡಿ.ಕೋಟೆಯ ಸವ್ವೆ  ಗ್ರಾಮಸ್ಥರು, ಲೋಕಸಭೆ ಚುನಾವಣೆ ಬಹಿಷ್ಕರಿಸಿ ಪ್ರತಿಭಟನೆಗೆ ಇಳಿದಿದ್ದಾರೆ. ಎಸ್.ಸಿ ಮತ್ತು ಎಸ್.ಟಿ. ದರ್ಖಾಸ್ ಜಮೀನನ್ನು ಆಂಧ್ರಪ್ರದೇಶದ ವ್ಯಕಿಯೊಬ್ಬ ದಬ್ಬಾಳಿಕೆಯಿಂದ ಪಡೆದು, ರೈತರ ಜಮೀನಿಗೆ ತಂತಿ ಬೇಲಿ ಹಾಕಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸವ್ವೆ ಗ್ರಾಮದ ಪ.ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ಸರ್ವೆ ನಂಬರ್ 58.59.65.70  ಅನ್ನ ಗ್ರಾಮದ ಹತ್ತು ಜನರಿಗೆ 1975ರಲ್ಲಿ ಜಮೀನು ಮಂಜೂರು ಮಾಡಲಾಗಿತ್ತು. ಏಕಾಏಕಿ ಅನಂತಪುರಂ ದ್ವಾರಕನಗರ ನಿವಾಸಿ ಜಿ.ನಾರಾಯಣ ಹಾಗೂ ಶ್ರೀನಿವಾಸ್ ಎಂಬುವವರು ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು  4 ತಿಂಗಳಿಂದ  ರೈತರ ಸ್ವಾಧೀನದಲ್ಲಿದ್ದ ಜಮೀನಿನಲ್ಲಿ ದಬ್ಬಾಳಿಕೆ ನಡೆಸುತ್ತಿದ್ದ ಇವರು ಏಕಾಏಕಿ ನುಗ್ಗಿ ರೈತರ ಜಮೀನಿನ ಜೊತೆಗೆ ಸರ್ಕಾರಿ‌ ಭೂಮಿ  ಸೇರಿ ಸುಮಾರು 70 ಎಕರೆ ಜಾಗಕ್ಕೆ ತಂತಿಬೇಲಿ ಹಾಕಿ ಮನೆಯನ್ನು ನಿರ್ಮಾಣ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಅಕ್ರಮದಲ್ಲಿ ರಾಜ್ಯದ ಪ್ರಭಾವಿ ಪೊಲೀಸ್ ಅಧಿಕಾರಿಯ ಸಂಬಂಧಿ ಭಾಗಿಯಾಗಿದ್ದಾರೆ ಇದಕ್ಕೆ ಪ್ರಭಾವಿ ಪೊಲೀಸ್ ಅಧಿಕಾರಿಯೇ ಕುಮ್ಮಕ್ಕು ನೀಡಿದ್ದಾರೆಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ  ಹಲವಾರು ಬಾರಿ ತಹಸೀಲ್ದಾರಿಗೆ ಮನವಿ ಸಲ್ಲಿಸಿದ್ರು ಪ್ರಯೋಜನವಾಗಿಲ್ಲವಂತೆ. ಇದರಿಂದ ಸಾಮೂಹಿಕವಾಗಿ ಲೋಕಸಭಾ ಚುನಾವಣೆ ಬಹಿಷ್ಕಾರಿಸಲು ನಿರ್ಧರಿಸಿದ್ದಾರೆ. ಮನವೊಲಿಸಲು ಬಂದ ಚುನಾವಣಾ ಅಧಿಕಾರಿಗಳ ಸಭೆಯು ವಿಫಲವಾಗಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv