ಗ್ರಾಮದಲ್ಲಿ ಮತಗಟ್ಟೆ ನಿರ್ಮಾಣ ಮಾಡದಿದ್ದಕ್ಕೆ ಮತದಾನ ಬಹಿಷ್ಕಾರ

ಮೈಸೂರು: ಜಿಲ್ಲೆಯ ಹೆಚ್.ಡಿ ಕೋಟೆ ತಾಲೂಕಿನ ನೇರಳೆ ಹೊಸೂರು ಗ್ರಾಮಸ್ಥರು, ಗ್ರಾಮದಲ್ಲಿ ಮೂಲಭೂತ ಸೌಕರ್ಯ, ಮತಗಟ್ಟೆ ನಿರ್ಮಾಣ ಮಾಡದಿದ್ದಕ್ಕೆ ಮತದಾನ ಬಹಿಷ್ಕರಿಸಿ ಧರಣಿ ನಡೆಸಿದರು.

ನೇರಳೆ ಹೊಸೂರು ಗ್ರಾಮಸ್ಥರು 5 ಕಿಲೋಮೀಟರ್​ ದೂರದಲ್ಲಿರುವ ಎಲಮತ್ತೂರು ಗ್ರಾಮಕ್ಕೆ ತೆರಳಿ ಮತ ಚಲಾಯಿಸಬೇಕಿತ್ತು. ಆದರೆ ಗ್ರಾಮಕ್ಕೆ ಉತ್ತಮ ಸಾರಿಗೆ ಸಂಪರ್ಕ ಇಲ್ಲದ ಕಾರಣ ನಾಲ್ಕೈದು ಕಿ.ಮೀ ನಡೆದು ಹೋಗಲಾಗದೆ ಮತದಾನ ಬಹಿಷ್ಕಾರ ಮಾಡಿದ್ದೇವೆ ಅಂತಾ ತಿಳಿಸಿದರು. ಇನ್ನು ಗ್ರಾಮಸ್ಥರು ನಮ್ಮ ಊರಿನಲ್ಲಿ ಮತಗಟ್ಟೆ ತೆರೆಯುವವರೆಗೂ ಮತದಾನ ಮಾಡಲ್ಲವೆಂದು ಪಟ್ಟು ಹಿಡಿದಿದ್ದರು. ನೇರೆಳೆ ಹೊಸೂರಿನಲ್ಲಿ 274ಮತದಾರರಿದ್ದು , ಈ ವರೆಗೂ ಪಕ್ಕದ ಎಲೆಮತ್ತೂರು ಗ್ರಾಮಕ್ಕೆ ಯಾರು ಸಹ ಹೋಗಿ ಮತ ಚಲಾಯಿಸಿಲ್ಲ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv