ಶಂಕಿತ ಮಕ್ಕಳ ಅಪಹರಣಕಾರರನ್ನು ಹಿಡಿದು ಥಳಿಸಿದ ಗ್ರಾಮಸ್ಥರು

ಬಳ್ಳಾರಿ: ಬಳ್ಳಾರಿ ಸಮೀಪದ ಸಂಗನಕಲ್ ಗ್ರಾಮದಲ್ಲಿ ಮಕ್ಕಳ ಕಳ್ಳರು ನುಸುಳಿದ್ದಾರೆಂಬ ಶಂಕೆ ವ್ಯಕ್ತವಾಗಿದೆ. ಬಟ್ಟೆ ಗಂಟು ಸಮೇತ ಕಾಣಿಸಿಕೊಂಡಿದ್ದ ಓರ್ವ ಪುರುಷ ಹಾಗೂ ನಾಲ್ವರು ಮಹಿಳಾ ಶಂಕಿತ ಅಪಹರಣಕಾರರನ್ನು ಗ್ರಾಮಸ್ಥರು ಹಿಡಿದು ಥಳಿಸಿದ್ದಾರೆ. ಬಳಿಕ ಶಂಕಿತ ಆರೋಪಿಗಳನ್ನು ಬಳ್ಳಾರಿ ಗ್ರಾಮೀಣ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಪಹರಣಕಾರರ ಭೀತಿಯಿಂದಾಗಿ ಗ್ರಾಮಸ್ಥರು ರಾತ್ರಿಯಿಡೀ ನಿದ್ದೆ ಮಾಡಿಲ್ಲ ಎನ್ನಲಾಗಿದ್ದು, ಗ್ರಾಮದ ಪ್ರಿಯಾಂಕಾ ಎಂಬುವವರ ಅಪಹರಣವಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv