ಧ್ವಜಾರೋಹಣ ಮಾಡಲು ಗ್ರಾ.ಪಂ ಸಿಬ್ಬಂದಿ ನಿರ್ಲಕ್ಷ್ಯ

ಬಾಗಲಕೋಟೆ: ಬದಾಮಿ ತಾಲೂಕಿನ ಕೈನಕಟ್ಟಿ ಗ್ರಾಮ ಪಂಚಾಯ್ತಿಯಲ್ಲಿ ಸಿಬ್ಬಂದಿ ರಾಷ್ಟ್ರಧ್ವಜ ಹಾರಿಸೋಕೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎನ್ನಲಾಗಿದೆ. ಬೆಳಗ್ಗೆ 7 ಗಂಟೆಗೆ ಧ್ವಜ ಹಾರಿಸಬೇಕು ಎನ್ನುವ ನಿಯಮವಿದ್ದರೂ, 9 ಗಂಟೆಯಾದ್ರೂ ಸಿಬ್ಬಂದಿ ಧ್ವಜ ಹಾರಿಸಿಲ್ಲ. ಪಂಚಾಯತ್ ಸಿಬ್ಬಂದಿಯ ಈ ಬೇಜವಾಬ್ದಾರಿಯುತ ವರ್ತನೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv