ತಮಿಳುನಾಡು ಆಲ್​ರೌಂಡರ್​ ವಿಜಯ್​ ಶಂಕರ್​ಗೆ ಒಲಿದ ಅದೃಷ್ಟ..!

ಟೀಂ ಇಂಡಿಯಾ ಆಲ್​ರೌಂಡರ್ ತಮಿಳನಾಡಿನ  ವಿಜಯ್​ ಶಂಕರ್​ಗೆ ವಿಶ್ವಕಪ್ ಟೂರ್ನಿ ಆಡುವ ಅದೃಷ್ಟ ಒಲಿದಿದೆ. ವಿಶ್ವಕಪ್​ ಟೂರ್ನಿಗಾಗಿ ಆಯ್ಕೆ ಮಾಡಲಾದ 15 ಆಟಗಾರರ ಟೀಂ ಇಂಡಿಯಾದಲ್ಲಿ ವಿಜಯ್ ಶಂಕರ್ ಸ್ಥಾನ ಪಡೆದಿದ್ದಾರೆ. ಆಲ್​ರೌಂಡರ್​ ರೂಪದಲ್ಲಿ ವಿಜಯ್​ ಶಂಕರ್​​ಗೆ ಚಾನ್ಸ್ ಲಭಿಸಿದೆ.ನ್ಯೂಜಿಲೆಂಡ್​ ವಿರುದ್ಧದ ಏಕದಿನ ಸರಣಿ ಹಾಗು ಭಾರತದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಬೌಲಿಂಗ್, ಬ್ಯಾಟಿಂಗ್ ಎರಡರಲ್ಲೂ ಶಂಕರ್ ಉತ್ತಮ ಪ್ರದರ್ಶನ ನೀಡಿದ್ರು. ಸದ್ಯ ನಡೆಯುತ್ತಿರುವ ಐಪಿಎಲ್​ನಲ್ಲೂ ಸನ್​ರೈಸರ್ಸ್​ ಪರ ಶಂಕರ್​ ಮಿಂಚುಹರಿಸುತ್ತಿದ್ದಾರೆ. ಮಧ್ಯಮ ವೇಗಿಯಾಗಿರೋ ಶಂಕರ್ ಇಂಗ್ಲೆಂಡ್​ ಸ್ಪೀಡ್​ ಟ್ರ್ಯಾಕ್​ಗಳಲ್ಲಿ ಸ್ಪೀಡ್​ ಟ್ರಯಾ ಇನ್​​​ಸ್ವಿಂಗ್, ಔಟ್​​ಸ್ವಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಜೊತೆಗೆ ಬ್ಯಾಟಿಂಗ್​ನಲ್ಲೂ ತಂಡಕ್ಕೆ ನೆರವಾಗಲಿದ್ದಾರೆ. ಈ ಹಿನ್ನಲೆಯಲ್ಲಿ ಆಯ್ಕೆ ಸಮಿತಿ ಶಂಕರ್​ಗೆ ಅವಕಾಶ ನೀಡಿದೆ ಎನ್ನಲಾಗ್ತಿದೆ.