ಮಸಲ್‌ಮ್ಯಾನ್ ವಿದ್ಯುತ್ ಜಮ್ವಾಲ್‌ ಫಿಟ್ನೆಸ್ ಮಂತ್ರವಿದು..!

ವಿದ್ಯುತ್ ಜಮ್ವಾಲ್‌ ಬಗ್ಗೆ ನಿಮ್ಗೆ ಗೊತ್ತಿರಬೇಕು. ಬಾಲಿವುಡ್‌ನಲ್ಲಿ ಮಸಲ್‌ಮ್ಯಾನ್ ಅಂತಲೇ ಖ್ಯಾತಿ ಗಳಿಸಿದವರು. ಬಹು ಭಾಷಾ ನಟರಾಗಿರುವ ಇವರು, ಆ್ಯಕ್ಷನ್ ಸಿನಿಮಾಗಳಲ್ಲಿ ಅವರ ಸಾಹಸ, ಹೊಡೆದಾಟದ ದೃಶ್ಯಗಳನ್ನು ನೋಡಿವುದೇ ವರ್ಣರಂಜಿತ. ಅವರ ಫಿಟ್ನೆಸ್ ಜರ್ನಿ ಮಗುವಾಗಿದ್ದಾಗಿನಿಂದಲೂ ಇದೆಯಂತೆ. ಜಂಗ್ಲೀ ಸಿನಿಮಾದಲ್ಲಂತೂ ಅವರ ಕೌಶಲ್ಯ, ಹೆಚ್ಚು ಸಾಹಸ ಪ್ರದರ್ಶಿಸುವ ದೃಶ್ಯಗಳು ಗಮನ ಸೆಳೆಯುತ್ತವೆ. ಫೋರ್ಸ್, ಕಮಾಂಡೋ, ಕಮಾಂಡೋ-2, ಹಾಗೂ ಸಿನಿಮಾಗಳನ್ನು ನೋಡಿದ್ರೆ ಗೊತ್ತಾಗುತ್ತೆ.! ಈ ಸಿನಿಮಾಗಳಲ್ಲಿನ ಅವರ ಸಾಮರ್ಥ್ಯ, ಚಾಣಾಕ್ಷತೆ, ಮಸಲ್ಸ್ ಸ್ಟ್ರೆಂಥ್‌, ಫ್ಲೆಕ್ಸಿಬಿಲಿಟಿ ಎದ್ದು ಕಾಣುತ್ತದೆ. ವಿದ್ಯುತ್ ಜಮ್ವಾಲ್‌ ದೈನಂದಿನ ಫಿಟ್ನೆಸ್ ಹೇಗಿರುತ್ತೆ? ಅವರು ಸೇವಿಸುವ ಆಹಾರವೇನು? ಎಂಬುದರ ಬಗ್ಗೆ ಹೇಳಿಕೊಂಡಿದ್ದಾರೆ.

ಡಯೆಟ್ ಫಾಲೋ ಮಾಡೋದೇನು?
ಸರಳವಾದ ಭಾರತದ ಶೈಲಿಯ ಆಹಾರವನ್ನು ವಿದ್ಯುತ್ ಇಷ್ಟಪಡುತ್ತಾರಂತೆ. ವಿದ್ಯುತ್ ಹೇಳುವ ಪ್ರಕಾರ, ಪ್ರತಿದಿನ ಡ್ರೈ ಫ್ರೂಟ್ಸ್‌ ಅಂಜೂರ ಹಣ್ಣು, ಗೋಡಂಬಿ, ಬಾದಾಮಿ, ಖರ್ಜೂರ ತಿನ್ನುತ್ತೇನೆ, ಹೆಚ್ಚು ನೀರು ಕುಡಿಯುತ್ತೇನೆ. ಇದು ದೇಹವನ್ನು ಹೈಡ್ರೇಟ್‌ ಆಗಿಡಲು ಸಹಾಯ ಮಾಡುತ್ತದೆ. ಇದಕ್ಕೆ ಅಶ್ವಗಂಧ ಪೌಡರ್, ಮ್ಯುಸ್ಲಿ ಪೌಡರ್, ಎಫೆರೆಸೆಂಟ್ ವಿಟಮಿನ್‌ ಸಿ ಜತೆಗೆ ಬೆರೆಸಿ ಸೇವಿಸುತ್ತೇನೆ. ಪಾಸ್ತಾ, ಬಾಜ್ರಾ ಧ್ಯಾನ್ಯ ಅಂದ್ರೆ ಇಷ್ಟ. ಬೇಯಿಸಿದ ಹಸಿರು ತರಕಾರಿ ಲಂಚ್, ಡಿನ್ನರ್‌ನಲ್ಲಿ ಸೇವಿಸುತ್ತೇನೆ. ಈ ಡಯಟ್‌ ಜೀರ್ಣಕ್ರಿಯೆಗೆ ಸಹಕಾರಿಯಾಗುವುದಲ್ಲದೇ, ನನ್ನ ಆರೋಗ್ಯವನ್ನು ರಕ್ಷಿಸುತ್ತದೆ ಎಂದು ವಿದ್ಯುತ್ ತಿಳಿಸಿದ್ದಾರೆ.

ನಿಮ್ಮ ಫಿಟ್ನೆಸ್ ಮಂತ್ರ ಯಾವುದು?
ದೇಹದ ತೂಕ ಬ್ಯಾಲೆನ್ಸ್ ಆಗಿ ಇಡಲು ತರಬೇತಿ ಬಹಳ ಮುಖ್ಯ. ದೇಹದ ತೂಕದ ಮೇಲೆ ಗಮನ ಕೇಂದ್ರಿಕರಿಸಲು ನಾನು ಯೋಗ, ಕಲಾರಿ ಪಯಟ್ಟು ಮಾಡುತ್ತೇನೆ. ಇದು ಉಸಿರಾಟಕ್ಕೆ ಉತ್ತಮವಾದದ್ದು, ನನ್ನ ತರಬೇತಿ ಮಾದರಿ ಸಾಮಾನ್ಯವಾಗಿರುತ್ತದೆ. ಸಮತೋಲಿತ ತಾಲೀಮು ನನ್ನದಾಗಿರುತ್ತದೆ ಹೊಸ ಸ್ಕಿಲ್ಸ್‌ ಕಲಿಯುವುದ ಫಿಟ್ನೆಸ್ ಮಂತ್ರ. ಡಿಫರೆಂಟ್ ಮಸಲ್ಸ್ ಗ್ರೂಪ್‌ ಮೇಲೆ ಗಮನ ಕೇಂದ್ರಿಕರಿಸುತ್ತೇನೆ. ವಿಕ್ ಮಸಲ್ಸ್‌ ಬಗ್ಗೆ ತಿಳಿದು, ಅದಕ್ಕಾಗಿ ಹೆಚ್ಚಿನ ಸಮಯ ವರ್ಕೌಟ್‌ಗೆ ಮೀಸಲಿಡುತ್ತೇನೆ. ಹೊಸ ಕೌಶಲ್ಯ ಕಲಿಯುವುದರಿಂದ ಮನಸ್ಸಿಗೆ ಕೂತುಹಲ ಹೆಚ್ಚುತ್ತದೆ. ವರ್ಕೌಟ್ ತರಬೇತಿಯಲ್ಲಿದ್ದಾಗ ಸಾಮರ್ಥ್ಯ ಹೆಚ್ಚಿಸುತ್ತದೆ. ಇದನ್ನು ಒಮ್ಮೆ ತಿಳಿದುಕೊಂಡರೆ. ದೇಹ ಹಾಗೂ ಮನಸ್ಸು ರಿಲೀಫ್ ಕಡೆ ಸಾಗುತ್ತದೆ. ವಾರದಲ್ಲಿ 6 ದಿನಗಳ ಕಾಲ ದೇಹದ ವರ್ಕೌಟ್ ಮಾಡುತ್ತೇನೆ. ಬಾಡಿ ಸಿಸ್ಟಮ್ ಮೇಲೆ ನಾನು ಹೆಚ್ಚು ಫೋಕಸ್ ಮಾಡುತ್ತೇನೆ. ದೇಹವು ಅನೇಕ ಮಲ್ಟಿಪಲ್ ಸಿಸ್ಟಮ್‌ನಿಂದ ವಿಭಜನೆಗೊಂಡಿರುತ್ತೆ. ನರ್ವಸ್‌, ಹೃದಯರಕ್ತನಾಳ, ಸ್ನಾಯು, ಹೀಗೆ ಪ್ರತಿ ಸಿಸ್ಟಮ್‌ಗೂ ದಿನಕ್ಕೆ 1 ಬಾರಿಯಾದ್ರು ವರ್ಕೌಟ್ ಮಾಡುತ್ತೇನೆ. ನಂತರ ಸ್ವಿಮಿಂಗ್, ಸ್ಕಿಪಿಂಗ್, ರನ್ನಿಂಗ್, ಸೈಕ್ಲಿಂಗ್‌ನಲ್ಲಿ ಪಾಲ್ಗೊಳ್ಳುತ್ತೇನೆ. ಬರೀ ಮಸಲ್ಸ್‌ ಮೇಲೆ ವರ್ಕೌಟ್ ಮಾಡುವುದರಿಂದ ಉಪಯೋಗವಿಲ್ಲ. ದೇಹದ ಅಂಗಾಗಗಳ ಮೇಲೂ ಹೆಚ್ಚು ಗಮನಹರಿಸಬೇಕಾಗುತ್ತೆ. ಅಂಗಾಗಕ್ಕೆ ಸಂಬಂಧಪಟ್ಟ ವರ್ಕೌಟ್ ಮಾಡುವುದರಿಂದ ದೇಹದ ಪ್ರತಿಯೊಂದು ಭಾಗಕ್ಕೂ ಶಕ್ತಿ ದೊರೆಯುತ್ತದೆ. ಆರೋಗ್ಯದಿಂದ ಇರಬಹುದು ಎಂದು ವಿದ್ಯುತ್ ಹೇಳುತ್ತಾರೆ.

ಸ್ಟ್ರೆಂಥ್‌, ಹೃದಯದ ಆರೋಗ್ಯಕ್ಕೆ ಮಾರ್ಷಲ್ ಆರ್ಟ್!
ವಿದ್ಯುತ್ ದೇಹ ನೋಡಿದ್ರೆ ಕಬ್ಬಿಣದ ದಿಮ್ಮಿಯಂತೆ ಭಾಸವಾಗುತ್ತದೆ. ಅನಾವಶ್ಯಕ ಕೊಬ್ಬು ಬೆಳಯಲು ಅವಕಾಶನೇ ಇಲ್ಲದಂತಹ ದಿನಚರಿ ಅವರದು. ದೇಹದ ಕ್ಷಮತೆ ಪಡೆಯಲು ಮಾರ್ಷಲ್ ಆರ್ಟ್ ಅಭ್ಯಾಸ ಮಾಡಿದರೆ ಏಕಕಾಲಕ್ಕೆ ಹಲವು ಬಗೆಯ ಆಗೋಗ್ಯ ಫಲಿತಾಂಶ ಪಡೆಯಬಹುದು, ಇದು ಸ್ಟ್ರೆಂಥ್‌, ಹೃದಯದ ಆರೋಗ್ಯಕ್ಕೆ ಉತ್ತಮವಾದದ್ದು ಎಂಬುದು ವಿದ್ಯುತ್ ಅನುಭವದ ಮಾತು. ನಾನಾ ಬಗೆಯ ಮಾರ್ಷಲ್ ಆರ್ಟ್‌ ಅಂದ್ರೆ ವಿದ್ಯುತ್‌ ಜಮ್ವಾಲ್‌ ತುಂಬಾ ಇಷ್ಟವಂತೆ.

https://www.instagram.com/p/Bxq4D1HnE7E/

https://www.instagram.com/p/BxR0p8rnr5w/

https://www.instagram.com/p/BrW1JgMHO0U/


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv