‘ಆ ಆಡಿಯೋದಲ್ಲಿ ಪ್ರಧಾನಿ ಹೆಸರನ್ನೂ ಎಳೆದು ತಂದಿರೋದು ದುರ್ದೈವ’

ಬೆಂಗಳೂರು: ಬಜೆಟ್​ ಅಧಿವೇಶನದ ವಿಧಾನಸಭಾ ಕಲಾಪ ಆರಂಭವಾಗಿದೆ. ಇವತ್ತಿನ ಅಧಿವೇಶನದ ಕಲಾಪ ಸಾಕಷ್ಟು ತೀವ್ರ ಕುತೂಹಲ ಮೂಡಿಸಿದೆ. ಯಾಕಂದ್ರೆ ಬಜೆಟ್​ ಮಂಡನೆಗೂ ಮುನ್ನ ಸಿಎಂ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ ಯಡಿಯೂರಪ್ಪ ವಿರುದ್ಧದ ಒಂದು ಆಡಿಯೋ ರಿಲೀಸ್​ ಮಾಡಿದ್ದರು. ಬಿಎಸ್​ವೈ ‘ಆಪರೇಷನ್ ಕಮಲ’ಕ್ಕೆ ಕಸರತ್ತು ನಡೆಸಿದ್ದಾರೆ ಎನ್ನಲಾಗಿರುವ ಆಡಿಯೋ ಇದಾಗಿದೆ.

ಸ್ಪೀಕರ್​ ಆಡಿಯೋ ಪ್ರಸ್ತಾಪ:
ಕಲಾಪ ಆರಂಭ ಆಗುತ್ತಿದ್ದಂತೆ ಆಡಿಯೋ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದ ಸ್ಪೀಕರ್ ರಮೇಶ್ ಕುಮಾರ್, ಸ್ಪೀಕರ್​ ಆದವರು ಸದನದ ಮೌಲ್ಯಗಳ ಪ್ರತೀಕ ಆಗಿರ್ತಾರೆ. ನನ್ನ ದೌರ್ಭಾಗ್ಯ ಆಡಿಯೋದಲ್ಲಿ ನನ್ನ ಹೆಸರು ಉಲ್ಲೇಖ ಆಗಿದೆ. ಮಾನ್ಯ ಮುಖ್ಯಮತ್ರಿಗಳು ಬರೆದಿರುವ ಪತ್ರದ ಸಾರಾಂಶ, ಆಡಿಯೋ ಸಾರಾಂಶದಲ್ಲಿ ಈ ಸದನದ ಸದಸ್ಯರೊಬ್ಬರ ಬಗ್ಗೆ ಬರೆಯಲಾಗಿದೆ. ಆಡಿಯೋದಲ್ಲಿ ನನಗೆ ₹50 ಕೋಟಿ ಕೊಡಲಾಗಿದೆ ಅಂತಾ ಹೇಳಲಾಗಿದೆ. ಇನ್ನೂ ದುಃಖದ ವಿಷಯ ಅಂದ್ರೆ ದೇಶದ ಪ್ರಧಾನಿ ಹೆಸರನ್ನೂ ಬಳಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.