ಯೋಗ ನಿಮ್ಮ ದೇಹಕ್ಕಾಗಿ, ಮೋದಿಗಾಗಿ ಅಲ್ಲ.. -ವೆಂಕಯ್ಯ ನಾಯ್ಡು

ಬೆಂಗಳೂರು: ಯೋಗ ನಿಮ್ಮ ದೇಹಕ್ಕಾಗಿ.. ಮೋದಿಗಾಗಿ ಅಲ್ಲ.. ಸ್ವಚ್ಛ ಭಾರತ.. ಯೋಗ.. ಎಲ್ಲವೂ ಸಾಮಾಜಿಕ ಮೂಮೆಂಟ್.. ಇದು ಯಾರೋ ಒಬ್ಬರಿಗಾಗಿ ಅಲ್ಲ. ದೇಶಕ್ಕಾಗಿ.. ನಮಗಾಗಿ.. ಅಂತಾ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.

ನಗರದಲ್ಲಿ ನಡೆದ ಸಿಎಂಆರ್ ಕಾಲೇಜು ಹಾಸ್ಟೆಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಅತ್ಯಂತ ಸಂತಸವಾಗ್ತಿದೆ. ಇಂದು ರಾಜ್ಯ ಹಾಗೂ ಕೇಂದ್ರ ಸರ್ಕಾರ ಪ್ರೈಮರಿ ಸೆಕೆಂಡರಿ ಎಜುಕೇಷನ್ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು. ಯಾಕಂದ್ರೆ ಭಾರತ ವಿಶ್ವದಲ್ಲಿ ವೇಗವಾಗಿ ಮುಂದಾಗ್ತಿದೆ. ಇಂದು ನಮ್ಮ ಪ್ರಬಲ ನೆರೆ ರಾಷ್ಟ್ರ ಕೂಡಾ ಜಿಡಿಪಿ ಹಿನ್ನಡೆ ಅನುಭವಿಸುತ್ತಿದೆ. ಆದ್ರೆ ಭಾರತದ ಜಿಡಿಪಿ ಶೇ. 7.3  ಮೂಲಕ ದಾಖಲೆ ನಿರ್ಮಿಸಿದೆ. ಈ ಸಂದರ್ಭದಲ್ಲಿ ನಮ್ಮ ಎಜುಕೇಷನ್ ಸಿಸ್ಟಂನ ಇನ್ನೂ ಬಲ ಪಡಿಸಬೇಕು ಅಂತಾ ಅಭಿಪ್ರಾಯ ಪಟ್ಟರು.

ಮಾತೃಭಾಷೆ ಅದ್ಯಯನಕ್ಕೆ ಮೊದಲ ಆದ್ಯತೆ ನೀಡಬೇಕು..
ಎಲ್ಲರೂ ಮಾತೃಭಾಷೆ ಬಗ್ಗೆ ಒತ್ತುಕೊಡಬೇಕು. ಮನೆಯಲ್ಲಿ ಖಡ್ಡಾಯವಾಗಿ ಮಾತೃಭಾಷೆಯನ್ನೇ ಬಳಸಬೇಕು. ಅದು ಕನ್ನಡವಾಗಿರಲಿ, ಮಲೆಯಾಳಿ ಆಗಿರಲಿ. ತೆಲುಗು ಬೆಂಗಾಲಿಯಾಗಿರಲಿ, ಮಾತೃಭಾಷೆ ಅದ್ಯಯನಕ್ಕೆ ಮೊದಲ ಆದ್ಯತೆ ನೀಡಬೇಕು ಅಂತಾ ಹೇಳಿದರು. ಇದೇ ವೇಳೆ, ಬೆಂಗಳೂರು ಒಂದು ಕಾಲದಲ್ಲಿ ಇಲ್ಲಿನ ಕ್ಲೈಮ್ಯಾಟ್ ನಿಂದಲೇ ಹೆಸರುವಾಸಿಯಾಗಿತ್ತು. ಆದ್ರೆ ಸದ್ಯ ಕ್ಲೈಮ್ಯಾಟ್ ಚೇಂಜ್ ನಿಂದಾಗಿ ಪರಿಸ್ಥಿತಿ ಬದಲಾಗಿದೆ. ಇದರ ಬಗ್ಗೆ ಯುವ ಜನರು ಯೋಚಿಸಬೇಕು ಅಂತಾ ಹೇಳಿದರು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv