‘ಸದಾಶಿವನಗರ, ಡಾಲರ್ಸ್ ಕಾಲೋನಿಯಲ್ಲೆಲ್ಲ ಉ-ಕದ ಮುಠ್ಠಾಳ ಶಾಸಕರೇ ತುಂಬಿದ್ದಾರೆ’

ಧಾರವಾಡ: ವಿಧಾನಸೌಧಕ್ಕೆ ಮೊದಲಿದ್ದಷ್ಟು ಪಾವಿತ್ರ್ಯತೆ ಈಗ ಇಲ್ಲ. ಅದೊಂದು‌ ರೀತಿಯ ಸಂತೆ ಮಾರ್ಕೆಟ್ ಆಗ್ಬಿಟ್ಟಿದೆ ಎಂದು ಝಾಡಿಸಿರುವ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಅವರು ಉತ್ತರ ಕರ್ನಾಟದ ರಾಜಕಾರಣಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ನಗರದಲ್ಲಿ ನಡೆದ ಪ್ರತ್ಯೇಕ ರಾಜ್ಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದ ಶಾಸಕರು ಉತ್ತರ ಕರ್ನಾಟಕಕ್ಕೆ ಬಂದ ಅನುದಾನವನ್ನು ಹಂಚಿಕೊಂಡು.. ಅಲ್ಲಿ ಹೋಗಿ ಬೆಂಗಳೂರಲ್ಲಿ ಮನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನ ಸದಾಶಿವ ನಗರ, ಡಾಲರ್ಸ್ ಕಾಲನಿಯಲ್ಲೆಲ್ಲ ಉ-ಕ ಭಾಗದ ಮುಠ್ಠಾಳ ಶಾಸಕರೇ ತುಂಬಿದ್ದಾರೆ. ಒಬ್ಬೊಬ್ಬ ಎಂಎಲ್‌ಎಗೆ ಕನಿಷ್ಠ ಹತ್ಹತ್ತು ಸೈಟ್‌ಗಳಿವೆ. ಹೀಗೇ ಬಿಟ್ರೇ.. ಬೆಂಗಳೂರಲ್ಲೆಲ್ಲ ಉತ್ತರ ಕರ್ನಾಟಕದ ರಾಜಕಾರಣಿಗಳೇ ತುಂಬಿ ಹೋಗ್ತಾರೆ! ಉತ್ತರ ಕರ್ನಾಟಕದ ಹಿನ್ನಡೆಗೆ ಈ ಭಾಗದ ಜನಪ್ರತಿನಿಧಿಗಳೇ ಕಾರಣ ಹೊರತು‌ ಬೇರೆಯವರೆಲ್ಲ ಎಂದು ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv