‘ಚುನಾವಣೆ ನಂತರ ಬಿಎಸ್‌ವೈ ಅಡ್ವಾಣಿ ಜಾಗಕ್ಕೆ ಬರ್ತಾರೆ’

ವಿಜಯಪುರ: ಚುನಾವಣೆ ನಂತರ ಬಿಎಸ್‌ವೈ, ಅಡ್ವಾಣಿ ಜಾಗಕ್ಕೆ ಬರ್ತಾರೆ. ಕೊನೆಯ ಹಂತದ ನಾಯಕರಾಗ್ತಾರೆ ಎಂದು ಬಿಎಸ್‌ ಯಡಿಯೂರಪ್ಪ ವಿರುದ್ಧ ಸಚಿವ ವೆಂಕಟರಾವ್ ನಾಡಗೌಡ ವಾಗ್ದಾಳಿ ನಡೆಸಿದ್ದಾರೆ. ಮೈತ್ರಿ ಸರ್ಕಾರ ಐಸಿಯು ನಲ್ಲಿದೆ, ಅಜ್ಜ, ಮೊಮ್ಮಕ್ಕಳು ಸೋಲ್ತಾರೆ ಎಂದು ಬಿಎಸ್‌ವೈ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಲ್ಲೂ ಕುಟುಂಬ ರಾಜಕಾರಣ ಇದೆ. ಉದಾಸಿ, ಯಡಿಯೂರಪ್ಪ ಇವರ ಮಕ್ಕಳು ರಾಜಕಾರಣದಲ್ಲಿ ಇದ್ದಾರೆ. ನಾಳೆ ಅವರಿಗೆ ಮೊಮ್ಮಕ್ಕಳು ಆದ ಮೇಲೆ ಅವರೂ ರಾಜಕೀಯಕ್ಕೆ ಬರ್ತಾರೆ. ದೇವೆಗೌಡ ಕುಟುಂಬ ಮುಂಬಾಗಿಲಿನಿಂದ ಬಂದಿದೆ, ಹಿಂಬಾಗಿಲಿನಿಂದ ಅಲ್ಲ. ಅವರಿಗೆ ಜನರೇ ಆಶೀರ್ವಾದ ಮಾಡಿದ್ದಾರೆ ಎಂದು ಹೆಚ್‌.ಡಿ ದೇವೇಗೌಡ ಕುಟುಂಬ ರಾಜಕಾರಣವನ್ನು ಸಮರ್ಥಿಸಿಕೊಂಡರು.

ಮೀನುಗಾರರ ಮಿಸ್ಸಿಂಗ್ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಎಲ್ಲಿ ಹೋದ್ರು ಏನು ಅನ್ನೋದರ ಬಗ್ಗೆ ಯಾವ ವಿಷಯಗಳು ಗೊತ್ತಾಗಿಲ್ಲ. ₹ 3 ಕೋಟಿ ಯೋಜನೆಯಲ್ಲಿ ಇಸ್ರೋ ತಂತ್ರಜ್ಞಾನದ ಅಳವಡಿಕೆಗೆ ತಯಾರಿ ನಡೆದಿದೆ. ಸದ್ಯಕ್ಕೆ ಪರಿಹಾರ ಕೊಡಲು ಸಾಧ್ಯವಿಲ್ಲ
ಅವರು ಸತ್ತಿದ್ದಾರೋ ಬದುಕಿದ್ದಾರೋ ಮಾಹಿತಿ ಇಲ್ಲ, ಡೆತ್ ಘೋಷಣೆಯಾದ್ರೆ ಪರಿಹಾರ ನೀಡಲು ಸಾಧ್ಯ. ಇಲ್ಲವೇ ಕಾನೂನು ಪ್ರಕಾರ ಮಿಸ್ಸಿಂಗ್ ಆಗಿ 10 ವರ್ಷ ಆಗಬೇಕಾಗುತ್ತೆ. ಆದ್ರೆ ತಾತ್ಕಾಲಿಕವಾಗಿ ₹ 1 ಲಕ್ಷ ಪರಿಹಾರ ನೀಡಲಾಗಿದೆ ಎಂದರು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv