ಪಾಟೀಲ್​​ರಿಗೆ ಗೃಹ ಇಲಾಖೆ ನೀಡಿರುವುದು ದುರಂತ: ದಿವ್ಯಾ ಹಾಗರಗಿ

ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪ ವಿರುದ್ಧ ಗೃಹ ಸಚಿವ ಎಂ.ಬಿ. ಪಾಟೀಲ್​​ರ ವೈಯಕ್ತಿಕ ಹೇಳಿಕೆ ಸಲ್ಲದು. ಅವರಿಗೆ ಗೃಹ ಇಲಾಖೆ ನೀಡಿರುವುದು ದುರಂತ ಎಂದು ವೀರಶೈವ ಲಿಂಗಾಯತ ಸ್ವಾಭಿಮಾನ ಬಳಗದ ಮಹಿಳಾಧ್ಯಕ್ಷೆ ದಿವ್ಯಾ ಹಾಗರಗಿ ಹೇಳಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಅವರು, ಎಂ.ಬಿ. ಪಾಟೀಲ್​​ ಕೂಡಲೇ ಕ್ಷಮೆ ಕೇಳಬೇಕು. ಅಲ್ಲದೇ, ಸಿಎಂ ಕುಮಾರಸ್ವಾಮಿ ಅವರು, ಎಂ.ಬಿ. ಪಾಟೀಲ್​ರನ್ನು ಗೃಹ ಇಲಾಖೆಯಿಂದ ಹಿಂಪಡೆಯಬೇಕು. ಇಲ್ಲದಿದ್ದರೆ ಸಿಎಂ ಮತ್ತು ಪಾಟೀಲ್ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ವೀರಶೈವ ಲಿಂಗಾಯತ ಸ್ವಾಭಿಮಾನ ಬಳಗ ಎಚ್ಚರಿಸಿದೆ. ಇನ್ನು, ಎಂ.ಬಿ. ಪಾಟೀಲ್​ರು ಬಾಪೂಜಿ ಸಂಸ್ಥೆ ಬಗ್ಗೆ ಹೇಳಿದ್ದಾರೆ. ನಾವು ಪಾಟೀಲರ ಬಿಎಲ್​ಡಿಇ ಸಂಸ್ಥೆ ಬಗ್ಗೆ ದಾಖಲೆ ತೆಗೆಯುತ್ತೇವೆ ಎಂದರು. ಶಾಮನೂರರನ್ನು ಕಾಂಗ್ರೆಸ್​​ ಕಡೆಗಣಿಸಿದೆ. ಅವರು ಇಲ್ಲದಿದ್ದರೇ ಕಾಂಗ್ರೆಸ್​ಗೆ ಉಳಿಗಾಲವಿಲ್ಲ. ಕಾಂಗ್ರೆಸ್​​ನಿಂದ ಶಾಮನೂರಿಗೆ ಅನ್ಯಾಯವಾಗುತ್ತಿದೆ. ಈ ಕಾರಣಕ್ಕೆ ಕಾಂಗ್ರೆಸ್ ತೊರೆಯಲು ಸ್ವಾಭಿಮಾನಿ ವೇದಿಕೆ ಮನವಿ ಮಾಡಲಿದೆ ಎಂದು ದಿದ್ಯಾ ಹಾಗರಗಿ ಹೇಳಿದರು.