ತಮಿಳುನಾಡಿಗೆ ‌ಕಾವೇರಿ ನೀರು ಬಿಡುಗಡೆಗೆ ವಿರೋಧ, ರಸ್ತೆಯಲ್ಲಿ ಮಲಗಿ ವಾಟಾಳ್ ಪ್ರೊಟೆಸ್ಟ್

ಮೈಸೂರು: ಜಿಂದಾಲ್ ಸಂಸ್ಥೆಗೆ ಭೂಮಿ ನೀಡುತ್ತಿರುವುದನ್ನು ಹಾಗೂ ತಮಿಳುನಾಡಿಗೆ ‌ನೀರು ಬಿಡುಗಡೆ ಮಾಡುವಂತೆ ಕಾವೇರಿ ಪ್ರಾಧಿಕಾರ ಆದೇಶ ನೀಡಿರುವುದನ್ನು ಖಂಡಿಸಿ ಕನ್ನಡ ಪರ ಹೋರಾಟಗಾರ ವಾಟಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ಮೈಸೂರಿನ ರೈಲು ನಿಲ್ದಾಣ ಮುಂಭಾಗದ ರಸ್ತೆಯಲ್ಲಿ ಮಲಗಿ ವಾಟಾಳ್ ಆಕ್ರೋಶ ವ್ಯಕ್ತಪಡಿಸಿದರು. ಮೊದಲನೇಯದಾಗಿ ನಾನು ಪ್ರಾಧಿಕಾರ ಒಪ್ಪುತ್ತಿಲ್ಲ. ತಮಿಳುನಾಡು ಪ್ರಾಧಿಕಾರ ಬೇಕು ಅಂತ ಹೇಳಿತ್ತು. ಪ್ರಾಧಿಕಾರಕ್ಕೆ ರಾಜ್ಯ ಸರ್ಕಾರದ ವಿರೋಧ ಕೂಡ ಇತ್ತು. ಆದ್ರೆ ಇದೀಗ ರಾಜ್ಯ ಸರ್ಕಾರ ಪ್ರಾಧಿಕಾರದ ಸಭೆಯಲ್ಲಿ ಭಾಗವಹಿಸಿ ಅದನ್ನು ಒಪ್ಪಿದೆ. ಯಾವುದೇ ಕಾರಣಕ್ಕೂ ಪ್ರಧಿಕಾರವನ್ನು ರಾಜ್ಯ ಸರ್ಕಾರ ಒಪ್ಪಬಾರದು. ಪ್ರಾಧಿಕಾರಕ್ಕೆ ನಮ್ಮ ವಿರೋಧವಿದೆ. ಒಂದು ಹನಿ ನೀರು ಕೊಟ್ರೆ ನಮ್ಮ ವಿರೋಧವಿದೆ. ನೀರು ಕೊಟ್ರೆ ಬೆಂಗಳೂರಿಗೆ ನೀರಿಲ್ಲ, ರೈತರಿಗೆ ನೀರಿಲ್ಲದ ಪರಿಸ್ಥಿತಿ ಉಂಟಾಗುತ್ತೆ. ಒಂದು ವೇಳೆ ನೀರು ಬಿಟ್ಟರೆ ಸಮಗ್ರ ಕನ್ನಡ ಸಂಘದಿಂದ ಕರ್ನಾಟಕ ಬಂದ್ ಮಾಡ್ತಿವಿ. ಕೆಆರ್‌ಎಸ್ ನಲ್ಲಿ ಜೂನ್ 3 ರಂದು ಸತ್ಯಾಗ್ರಹ ಮಾಡಲಾಗುವುದು ಎಂದು ವಾಟಳ್ ನಾಗರಾಜ್ ಹೇಳಿದರು.

ಇದೇ ವೇಳೆ ಮಾತನಾಡಿದ ನೀಡಿದ ಅವರು, ಇತ್ತೀಚೆಗೆ ಸರ್ಕಾರ ಸಚಿವ ಸಂಪುಟದಲ್ಲಿ ಜಿಂದಾಲ್ ಸಂಸ್ಥೆಗೆ ಭೂಮಿ ನೀಡಲು ಸಮ್ಮತಿ ನೀಡಿದೆ. ರೈತರ ಭೂಮಿ ಕಸಿದು ರಿಯಲ್ ಎಸ್ಟೇಟ್ ಸಂಸ್ಥೆಗೆ ನೀಡುತ್ತಿದ್ದಾರೆ. ಖಾಸಗಿ ಸಂಸ್ಥೆಯೊಂದಿಗೆ ರಾಜ್ಯ ಸರ್ಕಾರ ಭ್ರಷ್ಟಾಚಾರದ ಅವ್ಯವಹಾರ ನಡೆಸಿದೆ. 3,660ಕ್ಕೂ ಹೆಚ್ಚಿನ ಎಕರೆ ಭೂಮಿಯನ್ನು₹ 1.45 ಲಕ್ಷಗಳಿಗೆ ನೀಡುವ ಮೂಲಕ ರಾಜ್ಯಕ್ಕೆ ಲಕ್ಷ ಕೋಟಿ ಹಣ ನಷ್ಟವಾಗಲಿದೆ ಎಂದು ವಾಟಾಳ್ ನಾಗರಾಜ್ ಆರೋಪಿಸಿದರು. ಈ ಕೂಡಲೇ ರಾಜ್ಯ ಸರ್ಕಾರ ಈ ಆದೇಶವನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv