ಕೈಯಲ್ಲಿ ಚಪ್ಪಲಿ ಹಿಡಿದು ಉರುಳು ಸೇವೆ ಮಾಡಿ ಮತ ಕೇಳಿದ್ರು ವಾಟಾಳ್​ ನಾಗರಾಜ್​..!

ಬೆಂಗಳೂರು: ಏನ್​ ಮಾಡಿದ್ರೂ ಡಿಫ್ರೆಂಟ್​ ಆಗಿ ಮಾಡೋದು ಕನ್ನಡ ಚಳುವಳಿ ವಾಟಾಳ್​ ಪಕ್ಷದ ನಾಯಕ ವಾಟಾಳ್ ನಾಗರಾಜ್​ ಸ್ಟೈಲ್. ಅಂತೆಯೇ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಅಖಾಡಕ್ಕಿಳಿದಿರುವ ಅವರು, ಡಿಫ್ರೆಂಟ್​ ಆಗೇ ಮತಯಾಚನೆ ಆರಂಭಿಸಿದ್ದಾರೆ. ನಗರದ ಕೆಆರ್ ಮಾರ್ಕೆಟ್ ಮುಂಭಾಗ ತಮ್ಮ‌ ಚಿಹ್ನೆಯಾದ ಚಪ್ಪಲಿಯನ್ನ ಕೈಯಲ್ಲಿ ಹಿಡಿದು ಉರುಳು ಸೇವೆ ಮಾಡಿ ಮತಯಾಚನೆ ಮಾಡಿದ್ರು.

ಬಳಿಕ ಮಾತನಾಡಿದ ಅವರು, ಕರ್ನಾಟಕದ ಜನತೆ ಪರ, ಕನ್ನಡದ ಜನತೆ ಪರ ಎತ್ತರದ ಧ್ವನಿಯಲ್ಲಿ ಮಾತನಾಡೊ ಘರ್ಜಿಸೊ ಧೈರ್ಯ ನನ್ನೊಬ್ಬನಿಗೆ ಮಾತ್ರ ಇದೆ. ಜನ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ.. ನಾನು ಈ ಸಲ ಚುನಾವಣೆಯಲ್ಲಿ ಗೆದ್ದೇ ಗೆಲ್ತೀನಿ. ಚಪ್ಪಲಿ ಅನ್ನೋದು ಮನುಷ್ಯನಿಗೆ ಎಷ್ಟು ಮುಖ್ಯವೋ ಹಾಗೆ ನಾನು ಕೂಡ ನಮ್ಮ ಕರ್ನಾಟಕಕ್ಕೆ‌, ನಮ್ಮ ಜನತೆಗೆ ಅಷ್ಟೇ ಮುಖ್ಯ. ರಾಮನ ಚಪ್ಪಲಿ ಇಟ್ಟುಕೊಂಡು ಭರತ ರಾಜ್ಯಭಾರ ಮಾಡಿದ ಹಾಗೆ ನಾನು ಚಪ್ಪಲಿ ಚಿಹ್ನೆ ಹಿಡಿದು ಚುನಾವಣೆ ಗೆಲ್ಲುತ್ತೆನೆ ಎಂದು ತಿಳಿಸಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv