ಕಂಪಿಸುತ್ತಿದೆ ಸೇತುವೆ..! ಮಲಗಿದೆ ಪಾಲಿಕೆ..! ಜನರೇ ಹುಷಾರ್‌..!

ಬೆಂಗಳೂರು: ವರ್ತೂರ್ ಸೇತುವೆಯ ದುರಸ್ತಿ ಕಾರ್ಯ ಮತ್ತಷ್ಟು ವಿಳಂಬವಾಗಿದೆ. ಸೇತುವೆ ಕಂಪಿಸುವ ಸ್ಥಿತಿ ತಲುಪಿದ್ದರೂ ಕೆಲಸಕ್ಕೆ ಕೂಲಿಯಾಳುಗಳು ಸಿಗುತ್ತಿಲ್ಲ ಎಂದು ನೆಪಹೇಳಿ ಬಿಬಿಎಂಪಿ ಅಧಿಕಾರಿಗಳು ಕೈ ತೊಳೆದುಕೊಳ್ಳುತ್ತಿದ್ದಾರೆ. ಸೇತುವೆ ಸ್ಥಿತಿ ನೋಡಿ ಭಾರೀ ವಾಹನಗಳ ಸಂಚಾರವನ್ನು ಬಿಬಿಎಂಪಿ ಸ್ಥಗಿತಗೊಳ್ಳಿಸಿದೆ.

ಹಳೆಯ ಸೇತುವೆ ಇನ್ನೂ ರಿಪೇರಿಯಾಗಿಲ್ಲ. ಹೊಸ ಸೇತುವೆಯ ಕೆಲಸವೂ ಪ್ರಾರಂಭವಾಗಿಲ್ಲ. ಇದೇ ಜುಲೈನಲ್ಲಿ ರಿಪೇರಿ ಕೆಲಸ ಪೂರ್ಣವಾಗಬೇಕಿತ್ತು. ಆದ್ರೆ, ಕೆಲಸಕ್ಕೆ ಬೇಕಾದ ಸಾಮಾಗ್ರಿಗಳು ಸಮಯಕ್ಕೆ ಸರಿಯಾಗಿ ತಲುಪದ ಕಾರಣ ಕಾಮಗಾರಿ ವಿಳಂಬವಾಗಿದೆ. ದುರಸ್ತಿಗೆ ಬೇಕಾದ ಬೇರಿಂಗ್‌ಗಳು ಇನ್ನೂ ಬಂದಿಲ್ಲ. ಪಿಲ್ಲರ್‌ಗಳ ಬುಡ ಇನ್ನೂ ಭದ್ರವಾಗಿಲ್ಲ. ಪಕ್ಕದಲ್ಲೇ ಹೊಸ ಸೇತುವೆಯ ಕಾಮಗಾರಿಯೂ ಪ್ರಾರಂಭವಾಗಿಲ್ಲ. ಹೊಸ ಸೇತುವೆಯ ಪಿಲ್ಲರ್‌ಗಳಿಗಾಗಿ ಅಗೆಯುವ ಕೆಲಸವೇ ಇನ್ನೂ ಶುರುವಾಗಿಲ್ಲ. ಹೊಸ ಸೇತುವೆಗೆ ಬೇಕಾದ ಸಮಾಗ್ರಿಗಳೂ ಬಂದಿಲ್ಲ. ಈ ಸೇತುವೆಗಾಗಿ ಭೂಸ್ವಾಧೀನ ಕೆಲಸ ಇನ್ನೂ ನಡೆಯುತ್ತಿದೆ. ಇವೆಲ್ಲದರ ಮಧ್ಯೆ, ವಾಹನ ಸಂಚಾರದ ವೇಳೆ ವರ್ತೂರ್ ಸೇತುವೆ ಕಂಪಿಸುತ್ತಿದೆ. ಕೆಲಸಗಾರರು ಬರ್ತಿಲ್ಲಾ ಅಂತಾ ಬಿಬಿಎಂಪಿ ಕೈಕಟ್ಟಿ ಕೂತಿದೆ.

     

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv