‘ಆಪರೇಷನ್‌ ಟ್ರಾನ್ಸ್‌ಫರ್’ ಶುರು, ಹೆಚ್​ಡಿ ರೇವಣ್ಣ ಪ್ರಭಾವ..?

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ರಚನೆಯಾಗಿ ಖಾತೆಗಳು ಹಂಚಿಕೆಯಾಗ್ತಿದ್ದಂತೆ ‘ಆಪರೇಷನ್‌ ಟ್ರಾನ್ಸ್‌ಫರ್’ ಶುರುವಾಗಿದೆ. ವಿವಿಧ ಇಲಾಖೆಗಳ 50ಕ್ಕೂ ಹೆಚ್ಚು ಮುಖ್ಯ ಎಂಜಿನಿಯರ್‌ಗಳನ್ನ ದಿಢೀರ್‌ ವರ್ಗಾವಣೆ ಮಾಡಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಲೋಕೋಪಯೋಗಿ, ಪಂಚಾಯತ್‌ ರಾಜ್‌, ಜಲಸಂಪನ್ಮೂಲ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯ ಎಂಜಿನಿಯರ್‌ಗಳು ವರ್ಗಾವಣೆಯಾಗಿದ್ದಾರೆ. ಇದೇ ವೇಳೆ, ಲೋಕೋಪಯೋಗಿ ಸಚಿವರಾದ ಹೆಚ್‌.ಡಿ.ರೇವಣ್ಣ ಅವರು ತಮಗೆ ಬೇಕಾದ ಅಧಿಕಾರಿಗಳನ್ನ ಆಯಾಕಟ್ಟಿನ ಜಾಗಕ್ಕೆ ವರ್ಗಾವಣೆ ಮಾಡಿಸಿದ್ದಾರೆ ಅಂತಾ ಹೇಳಲಾಗ್ತಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv