‘ದಾವೂದ್ ಇಬ್ರಾಹಿಂ ಹಾಗೂ ಸಿಎಂ ಇಬ್ರಾಹಿಂಗೆ ಏನಾದ್ರು ವ್ಯತ್ಯಾಸ ಇದ್ಯಾ?’

ಮೈಸೂರು: ರಾಜ್ಯದಲ್ಲಿ ದೋಸ್ತಿ ವರ್ಸಸ್ ದೋಸ್ತಿ ಅನ್ನೊ ಪರಿಸ್ಥಿತಿ ಇದೆ,  ಆದ್ರೆ ದೋಸ್ತಿಯಿಂದ ಬಿಜೆಪಿಗೆ ಅನುಕೂಲವಾಗಿದೆ. ಈ ಭಾರಿ ಬಿಜೆಪಿ ಕನಿಷ್ಠ 20 ಸ್ಥಾನ ಗೆಲ್ಲಲಿದೆ ಎಂದು ಚಾಮರಾಜನಗರ ಲೋಕಸಭಾ ‌ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್  ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅನುಯಾಯಿ ಆಗಿ ಪ್ರಸಾದ್ ಕೇಶವ ಕೃಪಾದಲ್ಲಿ ಕುಳಿತಿದ್ದಾರೆ ಅನ್ನೊ ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಆರ್ ಎಸ್ ಎಸ್​ಗೂ  ಕೇಶವ ಕೃಪಕ್ಕೂ ವ್ಯತ್ಯಾಸ ಇದೆ. ನಾನು ಒಬ್ಬ ಪೊಲಿಟಿಷೀಯನ್. ನಾನು ಬಿಜೆಪಿಯಲ್ಲಿ ಇದ್ರು ಕೂಡ ಅಂಬೇಡ್ಕರ್ ವಿಚಾರ ಧಾರೆ ಪರವಾಗಿದ್ದೇನೆ. ದಾವೂದ್ ಇಬ್ರಾಹಿಂ ಹಾಗೂ ಸಿ ಎಂ ಇಬ್ರಾಹಿಂ ಗೂ ಏನಾದ್ರು ವ್ಯತ್ಯಾಸ ಇದ್ಯಾ.?. ಇಬ್ರಾಹಿಂ ಒಬ್ಬ ಸ್ಪೈ ಇದ್ದ ಹಾಗೆ ದೇವೇಗೌಡ, ದೇವರಾಜ ಅರಸು ಬಗ್ಗೆ ಈ ಮನುಷ್ಯ ಏನು ಮಾತನಾಡಿದ್ದ ಅನ್ನೊದು ನನಗೆ ಗೊತ್ತು ಎಂದು ಸಿಎಂ ಇಬ್ರಾಹಿಂ ವಿರುದ್ಧ ಕಿಡಿಕಾರಿದ್ರು.

ಇದೇ ವೇಳೆ ಮುಸ್ಲಿಂ ಸಮೂದಾಯ ಕೂಡ ದೇಶದ ಮತದಾರರು . ಅವರ ಓಟ್ ಬೇಡಾ ಅನ್ನೊದು ತಪ್ಪು ಎಂದು ಕೆಲ ಬಿಜೆಪಿ ನಾಯಕರ ಹೇಳಿಕೆಗೆ ಶ್ರೀನಿವಾಸ್​ ಪ್ರಸಾದ್​ ಸ್ಪಷ್ಟನೆ ನೀಡಿದ್ರು. ಇನಗನು ದಲಿತರು ಸಿಎಂ ಆಗುವ ವಿಷಯದ ಕುರಿತು ,ಮಾತನಾಡಿ  ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಸಾಕಷ್ಟು ವ್ಯತ್ಯಾಸಗಳಾಯ್ತು. ಮಲ್ಲಿಕಾರ್ಜುನ ಖರ್ಗೆ ಕೇಂದ್ರಕ್ಕೆ ಹೋದರು. ಜಿ ಪರಮೇಶ್ವರ ಸೋತಿದ್ದು ದಲಿತರಿಗೆ ಸಿಎಂ ಪಟ್ಟ ಕೈತಪ್ಪಿತು. ದಲಿತರಿಗೆ ಸಿಎಂ ಆಗೋ ಅರ್ಹತೆ ಇದೆ. ಒಂದಾಲ್ಲಾ ಒಂದು ದಿನ ದಲಿತರು ಸಿಎಂ ಆಗ್ತಾರೆ ಎಂದು ಹೇಳಿದ್ರು. ಲೋಕ ಸಭೆ ಫಲಿತಾಂಶದ ಬಳಿಕ, ದೋಸ್ತಿಗಳೆ ಬಿದ್ದು ಹೋಗ್ತಾರೆ. ನಾವೂ ಏನು ಮಾಡುವ ಅಗತ್ಯ ಇಲ್ಲ ಎಂದು ಮೈತ್ರಿ ಪಕ್ಷದ ಭವಿಷ್ಯ ಹೇಳಿದ್ರು.

ಇನ್ನು ಅನಂತ್ ಕುಮಾರ್ ಹೆಗ್ಡೆ ಸಂವಿಧಾನ ಬದಲಾವಣೆ ಹೇಳಿಕೆ ಬಗ್ಗೆ ಮಾತನಾಡಿ,  ಆತನಿಗೆ ಸ್ಕಿಲ್ ಡೆವಲಪ್​ಮೆಂಟ್ ಖಾತೆ ಕೊಟ್ಟಿದ್ದಾರೆ. ಆದ್ರೆ ಆತ ಬೇರೆಯ ವಿಚಾರಕ್ಕೆ ಸ್ಕಿಲ್ ತೊರಿಸ್ತಾನೆ. ಈ ಬಗ್ಗೆ ಸಂಸತ್​ನಲ್ಲಿ ಅನಂತ್ ಕುಮಾರ್ ಹೆಗ್ಡೆ ಕ್ಷಮೆ ಕೇಳಿದ್ದಾರೆ. ಆ ತರದ ಹೇಳಿಕೆ ಬಾಲಿಷವಾದುದ್ದು ಎಂದು ಹೇಳಿದ್ರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv