ಬೈಕ್​ನಲ್ಲಿ ಬೆಂಕಿ, 4 ಕಿ.ಮೀ.ಚೇಸ್​​ ಮಾಡಿ ದಂಪತಿ ಕಾಪಾಡಿದ ಯುಪಿ ಪೊಲೀಸ್​​..!

ಆಗ್ರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಪೊಲೀಸರು ಸುಮಾರು 4 ಕಿ.ಮೀವರೆಗೆ ಚೇಸ್​ ಮಾಡಿ ಸಂಭವಿಸುತ್ತಿದ್ದ ದುರಂತ ಒಂದನ್ನ ಸಿನಿಮಾ ಸ್ಟೈಲ್​ನಲ್ಲಿ ತಡೆದಿದ್ದಾರೆ. ಪೊಲೀಸರು ಚೇಸ್​​ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಲ್ಲಿ ಸಖತ್ ವೈರಲ್ ಆಗಿದೆ.

ಏನಿದು ಸ್ಟೋರಿ..?
ಆಗ್ರಾ ಎಕ್ಸ್​ಪ್ರೆಸ್​ ಹೈವೇಯಲ್ಲಿ ದಂಪತಿ ಬೈಕ್​ನಲ್ಲಿ ಚಲಿಸುತ್ತಿದ್ದರು. ಇವ್ರ ಜೊತೆಗೆ ಮಗು ಕೂಡ ಇತ್ತು ಹಾಗೇ ಬೈಕಿನ ಹಿಂದೆ ಚೀಲ ಒಂದನ್ನ ಕಟ್ಟಲಾಗಿತ್ತು. ಸುಮಾರು 108 ಕಿ.ಮೀ ವೇಗದಲ್ಲಿ ಓಡುತ್ತಿದ್ದ ಬೈಕ್​ನ ಹಿಂಬದಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಪೊಲೀಸರ ಗಮನಕ್ಕೆ ಬಂದಿದೆ. ಕೂಡಲೇ ಪೊಲೀಸರು ಬೈಕ್​ ಅನ್ನ ಹಿಂಬಾಲಿಸಿ ನಿಲ್ಲಿಸುವಂತೆ ಪ್ಲಾನ್ ಮಾಡಿದ್ದಾರೆ.

ಆದರೆ ಹಿಂಬದಿ ಕೂತಿದ್ದ ಮಹಿಳೆ ಹೆಲ್ಮೆಟ್ ಹಾಕಿರಲಿಲ್ಲ. ಹೀಗಾಗಿ ಪೊಲೀಸರು ಬೈಕ್​ ಅನ್ನ ಮತ್ತಷ್ಟು ವೇಗವಾಗಿ ಓಡಿಸುವ ಸಾಧ್ಯತೆ ಇತ್ತು. ಹೀಗಾಗಿ ಪೊಲೀಸರು ತಮ್ಮ ವಾಹನದಲ್ಲಿದ್ದ ಬೋರ್ಡ್​ ಅನ್ನ ತೆಗೆದು ಓಡಿಸಿದ್ದಾರೆ. ನಂತ್ರ ಬೈಕ್ ಡ್ರೈವರ್ ಗಾಡಿಯನ್ನ ನಿಧಾನಕ್ಕೆ ಓಡಿಸಿದ್ದಾರೆ. ಅಷ್ಟೊತ್ತಿಗಾಗಲೇ ಗಾಡಿಯಲ್ಲಿ ಬೆಂಕಿ ಹತ್ತಿಕೊಂಡು ವಾಸನೆ ಬರುತ್ತಿರೋದು ಬಂದಿದೆ. ನಂತ್ರ ಬೆಂಕಿ ಇದ್ದಕ್ಕಿದ್ದಂತೆ ದೊಡ್ಡದಾಗಿದೆ. ಕೂಡಲೇ ಬೈಕ್​ ಅನ್ನ ನಿಲ್ಲಿಸಿದ್ದಾರೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ಬೆಂಕಿ ನಂದಿಸಿ ಅವರನ್ನ ರಕ್ಷಣೆ ಮಾಡಿದ್ದಾರೆ. ಪೊಲೀಸರು ಬೈಕ್ ಚೇಸ್​ ಮಾಡುವ ದೃಶ್ಯವನ್ನ ಸೆರೆ ಹಿಡಿದಿದ್ದಾರೆ. ಈ ವಿಡಿಯೋವನ್ನ ಉತ್ತರ ಪ್ರದೇಶದ ಪೊಲೀಸರು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv