‘ಹನುಮಾನ್ ಚಾಲೀಸ್​​ ಪಠಿಸಿದರೆ 1 ವೋಟ್, ಖುರಾನ್ ಪಠಿಸಿದ್ರೆ ಇನ್ನೂ1 ವೋಟ್ ಹೆಚ್ಚು’

ಮಂಗಳೂರು: ಕಾಂಗ್ರೆಸಿನದ್ದು ಉತ್ತಮ ಹಿಂದುತ್ವ. ಅಲ್ಲದೇ ಕಾಂಗ್ರೆಸ್ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸರು ಹೇಳಿಕೊಟ್ಟ ಹಿಂದುತ್ವವನ್ನು ಪಾಲಿಸುತ್ತದೆ. ಆದರೆ ಬಿಜೆಪಿಯದ್ದು ಬೇರೆಯದ್ದೇ ಹಿಂದುತ್ವ ಅಂತಾ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್‌ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಖಾದರ್‌, ಮೈತ್ರಿ ಅಭ್ಯರ್ಥಿ ಮಿಥುನ್ ರೈ ಪ್ರಚಾರ ಸಂದರ್ಭದಲ್ಲಿ ಹನುಮಾನ್ ಚಾಲೀಸ್​​, ಖುರಾನ್ ಪಠಣ ಮಾಡಿದ್ದನ್ನು ಸಚಿವ ಖಾದರ್ ಸಮರ್ಥಿಸಿಕೊಂಡಿದ್ದಾರೆ. ಹನುಮಾನ್ ಚಾಲೀಸ್​ ಪಠಿಸಿದರೆ ಒಂದು ವೋಟ್ ಹೆಚ್ಚು  ಕೊಡಬೇಕು. ಖುರಾನ್ ಪಠಣ ಮಾಡಿದರೆ ಮತ್ತೂ ಹೆಚ್ಚು ವೋಟ್ ಲಭಿಸಲಿದೆ ಅಂತಾ ಖಾದರ್ ಇದೇ ವೇಳೆ ಹೇಳಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv