ಮೈಕ್ರೋವೇವ್​ನಲ್ಲಿ ಆಹಾರ ಬಿಸಿ ಮಾಡೋದ್ರಿಂದ ಬರುತ್ತೆ ಮೆದುಳು ಕ್ಯಾನ್ಸರ್‌..!

ನೀವೂ ನಿಮ್ಮ ಆಹಾರವನ್ನು ಮೈಕ್ರೋವೇವ್​ನಲ್ಲಿ ಬಿಸಿ ಮಾಡಿ ಸೇವಿಸುತ್ತಿದ್ದೀರಾ? ಹಾಗಿದ್ರೆ ತಕ್ಷಣ ನಿಲ್ಲಿಸೋದು ಒಳ್ಳೆಯದು. ಯಾಕಂದ್ರೆ ಮೈಕ್ರೋವೇವ್​ನಲ್ಲಿ ಪ್ಲಾಸ್ಟಿಕ್​ ಪಾತ್ರೆಯಲ್ಲಿ ಬಿಸಿಮಾಡಿದ ಆಹಾರ ತಿನ್ನೋದ್ರಿಂದ ನಿಮ್ಗೆ ಮಾತ್ರವಲ್ಲದೆ ಹುಟ್ಟುವ ಮಕ್ಕಳಿಗೂ ಡಯಾಬಿಟಿಸ್​, ಕ್ಯಾನ್ಸರ್​ ಸಹಿತ ಅನೇಕ ರೀತಿಯ ಅನಾರೋಗ್ಯದ ಸಮಸ್ಯೆಗಳು ಕಾಡುತ್ತವೆ ಅಂತಾರೆ ಎಕ್ಸ್​ಪರ್ಟ್ಸ್​. ಪ್ಲಾಸ್ಟಿಕ್​ ಕಂಟೇನರ್​ ಇಟ್ಟು ಮೈಕ್ರೋವೇವ್​ನಲ್ಲಿ ಬಿಸಿಮಾಡುವ ಪದಾರ್ಥಗಳಲ್ಲಿ 95% ಕೆಮಿಕಲ್ಸ್​ ಸೇರ್ಪಡೆಗೊಳ್ಳುತ್ತಂತೆ. ಇದ್ರಿಂದ ಬ್ಲಡ್​ ಪ್ರೆಶರ್​ ಜಾಸ್ತಿಯಾಗಿ ಮೆದುಳು ಡ್ಯಾಮೇಜ್​ ಆಗುವ ಸಾಧ್ಯತೆ ಇದೆಯಂತೆ.

‘ಬಿಸ್ಫನೊಲ್​ ಎ’ ಪ್ಲಾಸ್ಟಿಕ್​ನಿಂದ ಉತ್ಪತ್ತಿಯಾಗುವ ವಿಷಯುಕ್ತ ಕೆಮಿಕಲ್​, ಸಾಮಾನ್ಯವಾಗಿ​ ಇದನ್ನ ಬಿಪಿಎ ಅಂತಾ ಕರೆಯಲಾಗುತ್ತೆ. ಇದು ದೇಹವನ್ನು ಪ್ರವೇಶಿಸಿ ಅನೇಕ ತೊಂದರೆಗಳನ್ನು ಉಂಟುಮಾಡುತ್ತದೆ. ದೇಹದಲ್ಲಿ ಹಾರ್ಮೊನ್​ ಬದಲಾವಣೆಯಾಗುತ್ತವೆ. ಅನೇಕ ರೀತಿಯ ಕ್ಯಾನ್ಸರ್ ರೋಗಗಳಿಗೆ ಎಡೆ ಮಾಡಿಕೊಡುತ್ತೆ. ಇಷ್ಟೇ ಅಲ್ಲ ಇದರ ಜೊತೆಗೆ, ವೀರ್ಯಾಣುಗಳ ಸಂಖ್ಯೆ ಕೂಡ ಕಡಿಮೆಯಾಗುತ್ತೆ ಹಾಗೂ ಪ್ರಾಣಿಗಳಲ್ಲಿ ಕಂಡುಬರುವಂತಹ ಕ್ಯಾನ್ಸರ್​ ರೋಗಗಳು ಬರುವ ಸಾಧ್ಯತೆಯಿದೆ ಅಂತಾರೆ ದೆಹಲಿಯ ಇಂದಿರಾ ಐವಿಎಫ್​ ಆಸ್ಪತ್ರೆಯ ಐವಿಎಫ್​ ಎಕ್ಸ್​ಪರ್ಟ್​ ಡಾ.ನಿತಾಶಾ ಗುಪ್ತಾ.

ಬಿಪಿಎ ಜಾಸ್ತಿ ಆದ್ರೆ ಏನಾಗುತ್ತೆ..?
ದೇಹದಲ್ಲಿ ಬಿಸ್ಫನೊಲ್​ ​ ಕೆಮಿಕಲ್​ ಅಂಶ ಜಾಸ್ತಿಯಾದಂತೆ, ಶೇ.90 ರಷ್ಟು ನೀವೂ ಕಂಪ್ಲೀಟ್ ​ಆಗಿ ರೋಗಗ್ರಸ್ತವಾಗಿ ಬಿಡುತ್ತೀರಿ. ನಿಮ್ಮಲ್ಲಿ ರೋಗ ನಿರೋಧಕ ಶಕ್ತಿಯು ಆಲ್ ಮೋಸ್ಟ್​ ಕುಂಠಿತವಾಗಿ, ಸದ್ಯದಲ್ಲೇ ಕ್ಯಾನ್ಸರ್​ ನಿಮ್ಮನ್ನ ಅವಲಂಬಿಸಿದ್ರೂ ಆಶ್ಚರ್ಯವಿಲ್ಲ. ಮುಖ್ಯ ಸಂಗತಿ ಏನಪ್ಪಾ ಅಂದ್ರೆ ಪ್ಲಾಸ್ಟಿಕ್​​​​​​​​​​​ನಲ್ಲಿರುವ ಕೆಮಿಕಲ್​ ಅಂಶ ಮೈಕ್ರೊವೇವ್​ನಲ್ಲಿ ಪದಾರ್ಥ ಬಿಸಿಯಾಗುತ್ತಿದ್ದಂತೆ, ಇದು ನಿಮ್ಮ ಆಹಾರ ಪದಾರ್ಥಗಳಲ್ಲಿ ಸೇರಿಕೊಳ್ಳುತ್ತದೆ. ಈ ಆಹಾರವನ್ನು ನೀವೂ ಸೇವಿಸುವುದ್ರಿಂದ ಮೆದುಳು ಕ್ಯಾನ್ಸರ್​ ಮತ್ತಿತರ ರೋಗಗಳು ನೀವೂ ಕರೆಯದೇ ಇದ್ರೂ ನಿಮ್ಮನ್ನ ಆವರಿಸಿಕೊಳ್ಳುವ ಸಾಧ್ಯತೆ ಇದೆ ಅಂತಿದ್ದಾರೆ ತಜ್ಞರು.

ಸ್ಟಾಪ್ ಈಟಿಂಗ್ ಪ್ಲಾಸ್ಟಿಕ್ ಪ್ಯಾಕ್ಡ್​​ ಫುಡ್​
ಆದಷ್ಟು ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ಮತ್ತು ಕಂಟೈನರ್​ಗಳಲ್ಲಿ ಪ್ಯಾಕ್​ ಆದ ಫುಡ್​ ತಿನ್ನುವುದನ್ನು ಕಡಿಮೆ ಮಾಡಿ. ಗ್ಲಾಸ್​ನಲ್ಲಿ ಶೇಖರಿಸಿದ ಆಹಾರವನ್ನು ತಿನ್ನಿ. ಪ್ಲಾಸ್ಟಿಕ್​​​​​​​​​ನಲ್ಲಿರುವಷ್ಟು ಕೆಮಿಕಲ್​ ಗ್ಲಾಸ್​ನಲ್ಲಿ ಇರಲ್ಲ. ಇದ್ರಿಂದ ಕ್ಯಾನ್ಸರ್​ ಬರೋದನ್ನು ತಡೆಗಟ್ಟಬಹುದು ಅಂತಾರೆ ಹೈದ್ರಾಬಾದ್​​ನ ಸ್ತ್ರೀರೋಗತಜ್ಞೆ ಡಾ.ಸ್ವಾತಿ.

ತಾಯ್ತನಕ್ಕೂ ಕಂಟಕ ಬಿಪಿಎ..!
‘ಅಮೆರಿಕನ್ ಸೊಸೈಟಿ ಆಫ್​ ರಿಪ್ರೊಡಕ್ವಿವ್​ ಹೆಲ್ತ್​’ ನಡೆಸಿದ ಅಧ್ಯಯನದ ಪ್ರಕಾರ, ಬಿಪಿಎ ಗರ್ಭಾವಸ್ಥೆಯಲ್ಲಿ ಭ್ರೂಣ ನಿಲ್ಲದಂತೆ ಮಾಡುವುದರ ಜೊತೆಗೆ ನೀವೂ ತಾಯಿ ಆಗುವ ಭಾಗ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ. ಸೋ, ಪ್ಲಾಸ್ಟಿಕ್​ ನಿಷೇಧಿಸಿ, ಹೆಲ್ದಿಯಾಗಿರಿ.

ವಿಶೇಷ ಬರಹ: ವಿದ್ಯಾ ಕೆ.ಹೆಚ್​.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv