#Summerseason ಮುಖದ ಶೈನಿಂಗ್​​ಗೆ ನೀವೇನು ಮಾಡ್ಬೇಕು ಗೊತ್ತಾ..?

ವಿಶ್ವದ ಅತ್ಯಂತ ದುಬಾರಿ ಮಸಾಲೆಗಳಲ್ಲಿ ಕೇಸರಿ ಕೂಡಾ ಒಂದು. ಇದು ನಿಮ್ಮ ದೇಹ ಮತ್ತು ಚರ್ಮಕ್ಕೆ ವಿವಿಧ ಪ್ರಯೋಜನಗಳನ್ನು ನೀಡುತ್ತದೆ. ಮಸಾಲೆ ಎಷ್ಟು ದುಬಾರಿಯಾಗಿದೆ ಎಂಬ ಕಾರಣದಿಂದಾಗಿ, ಕೆಲವರು ಕೇಸರಿಯನ್ನ ಬಳಸಲು ಹಿಂಜರಿತ್ತಾರೆ. ಒಂದು ಚಿಟಿಕೆ ಕೇಸರಿಯಲ್ಲೂ ಉತ್ತಮವಾದ ಆರೋಗ್ಯ ಗುಣಗಳಿವೆ. ಇದರ ಉತ್ಪಾದನೆ ಹಾಗೂ ವ್ಯಾಪಾರ ಪ್ರಪಂಚದೆಲ್ಲೆಡೆ ಬಹಳ ದುಬಾರಿಯಾದದ್ದು ಎಂದು ಹೇಳಲಾಗುತ್ತದೆ. ತ್ವಚೆಯ ಆರೈಕೆ, ಜೀರ್ಣಕ್ರಿಯೆಗೆ ಸಹಾಯ, ಹುಣ್ಣುಗಳನ್ನು ಗುಣಪಡಿಸಲು ಹೀಗೆ ಅನೇಕ ಸಮಸ್ಯೆಗಳಿಗೆ ಔಷಧಿ ರೂಪದಲ್ಲಿ ಬಳಸಬಹುದು.

1.ಕೇಸರಿ ಆ್ಯಂಟಿ ಸೋಲಾರ್​ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಸೂರ್ಯನ ಹಾನಿಕಾರಕ ನೇರಳಾತೀತ ಕಿರಣಗಳನ್ನು ಹೀರಿಕೊಂಡು ಸೂರ್ಯನ ಕಿರಣಗಳಿಂದ ಉಂಟಾಗುವ ಹಾನಿಗಳಿಂದ ಚರ್ಮವನ್ನು ರಕ್ಷಿಸುತ್ತದೆ.
2.ನೈಸರ್ಗಿಕವಾಗಿ ಚರ್ಮಕ್ಕೆ ಹೊಳಪನ್ನು ನೀಡುವಲ್ಲಿ ಕೇಸರಿ ಸಹಾಯ ಮಾಡುತ್ತದೆ. ಕೇಸರಿಯನ್ನು ಜೇನುತುಪ್ಪದೊಂದಿಗೆ ಫೇಸ್​ ಪ್ಯಾಕ್ ಹಾಕಿ ಸ್ವಲ್ಪ ಸಮಯದ ನಂತರ ತೊಳೆದುಕೊಂಡ್ರೆ ಮುಖದ ಕಾಂತಿ ಹೆಚ್ಚುತ್ತದೆ.
3. ಇನ್ನು ಕೆಸರಿಯನ್ನ ಹೊಂದಿರುವಂತ ಸೌಂದರ್ಯವರ್ಧಕ ಕ್ರೀಮ್​ಗಳು ಸಾಮಾನ್ಯವಾಗಿ ಉತ್ತಮ ಮಾಯಿಶ್ಚರೈಸರ್​ ಆಗಿ ಕೆಲಸ ಮಾಡುತ್ತದೆ.
4. ಚರ್ಮದಿಂದ ಅನಗತ್ಯ ಟ್ಯಾನಿಂಗ್ ತೆಗೆಯುವಲ್ಲಿ ಕೇಸರಿ ಸಹಾಯ ಮಾಡುತ್ತದೆ. ಹಾಲಿನ ಕೆನೆಯಲ್ಲಿ ಒಂದೆರಡು ಕೇಸರಿ ಎಳೆಗಳನ್ನ ಸೇರಿಸಿ ರಾತ್ರಿಯಿಡೀ ನೆನೆಸಿ. ಮರುದಿನ ಬೆಳಗ್ಗೆ, ಮಿಶ್ರಣವನ್ನು ಮಿಶ್ರಣ ಮಾಡಿ ಮುಖಕ್ಕೆ ಲೇಪಿಸಿ. ಈ ರೀತಿ ಮಾಡುವುದರಿಂದ ಸನ್​ ಟ್ಯಾನ್​ ಕಡಿಮೆಯಾಗಿ ಚರ್ಮದ ಕಾಂತಿ ಹೆಚ್ಚಾಗುತ್ತದೆ.
5. ಮೊಡವೆಗಳು ಹೆಚ್ಚಾಗ್ತಿದೆ ಅಂದ್ರೆ ಕೇಸರಿ ಅದಕ್ಕೆ ಬೆಸ್ಟ್​ ಸಲ್ಯೂಷನ್​. ಯಾಕಂದ್ರೆ ಕೇಸರಿ ಮೊಡವೆಗಳ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಕೇಸರಿಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ ಗುಣಗಳಿವೆ ಆದ್ದರಿಂದ ಇದನ್ನ ತುಳಸಿ ಎಲೆಗಳು ಮಿಶ್ರಮಾಡಿ ಪೇಸ್​ ಮಾಡಿ ಮುಖಕ್ಕೆ ಹಾಕಿ. ಅದು ಸಂಪೂರ್ಣವಾಗಿ ಒಣಗಿದ ನಂತರ ಮುಖವನ್ನ ತೊಳೆದುಕೊಳ್ಳಿ.
6. . ಕೇಸರಿ ಚರ್ಮವನ್ನು ಟೋನಿಂಗ್​ ಮಾಡುತ್ತದೆ. ಸಾಮಾನ್ಯವಾಗಿ ಟೋನಿಂಗ್​ ಮಾಡಿದಾಗ ತ್ಚಚೆ ಹೆಚ್ಚು ಕಾಂತಿಯುತವಾಗಿ ಕಾಣುತ್ತದೆ ಅದಕ್ಕಾಗಿ ಕೇಸರಿಯನ್ನು ಚರ್ಮದ ಟೋನರ್ ಆಗಿ ಬಳಸಲಾಗುತ್ತದೆ. ರೋಸ್​ ವಾಟರ್​ ಜೊತೆ ಕೇಸರಿ ಎಳೆಗಳನ್ನ ಸೇರಿಸಿ, ಹತ್ತಿಯ ಉಂಡೆಗಳಿಂದ ಈ ಮಿಶ್ರಣವನ್ನ ಮುಖಕ್ಕೆ ಹಚ್ಚಿ.
7. ಹಾಲಿನ ಕೆನೆಯ ಜೊತೆ 1 ಟೀಸ್ಪೂನ್ ಶ್ರೀಗಂಧದ ಪುಡಿ ಸೇರಿಸಿ. ಸುಮಾರು 20 ನಿಮಿಷಗಳ ಕಾಲ ನಿಮ್ಮ ಮುಖ ಮತ್ತು ಕುತ್ತಿಗೆಯ ಮೇಲೆ ಪ್ಯಾಕ್ ಅನ್ನು ಹಚ್ಚಿ. ಈ ರೀತಿ ಮಾಡಿದ್ರೆ, ಹೊಳೆಯುವ ತ್ವಚೆಯನ್ನ ಪಡೆಯಬಹುದು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv