ಸಿದ್ದಗಂಗಾ ಶ್ರೀಗಳು ಚೇತರಿಸಿಕೊಳ್ಳಲಿ ಅಂತಾ ಭಕ್ತರಿಂದ ಉರುಳು ಸೇವೆ

ದಾವಣಗೆರೆ: ಸಿದ್ದಗಂಗಾ ಶ್ರೀಗಳು ಚೇತರಿಸಿಕೊಳ್ಳಲಿ ಅಂತಾ ಪ್ರಾರ್ಥಿಸಿ ನಗರದ ಚಾಮರಾಜಪೇಟೆಯಲ್ಲಿರುವ ದುರ್ಗಾಂಬಿಕ ದೇವಸ್ಥಾನದಲ್ಲಿ, ಕರ್ನಾಟಕ ಏಕತಾ ವೇದಿಕೆಯ ಕಾರ್ಯಕರ್ತರು ಉರುಳು ಸೇವೆ ಮಾಡಿದರು. ಈ ವೇಳೆ ಶ್ರೀಗಳ ಕೆಲ ಭಕ್ತರು ನಡೆದಾಡುವ ದೇವರ ಆರೋಗ್ಯ ಶೀಘ್ರವಾಗಿ ಚೇತರಿಕೆಯಾಗಲಿ. ಜೊತೆಗೆ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಪುರಸ್ಕಾರವೂ ಸಿಗಲಿ  ಎಂದು ಪ್ರಾರ್ಥಿಸಿದರು.