ಹುತಾತ್ಮರಿಗೆ ‘ಉರಿ’ ತಂಡದಿಂದ ₹1 ಕೋಟಿ

ಪುಲ್ವಾಮಾ: ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ದೇಶ ಮಾತ್ರವಲ್ಲದೇ, ಜಾಗತಿಕವಾಗಿ ಖಂಡನೆ ವ್ಯಕ್ತವಾಗ್ತಿದೆ. ಇನ್ನು ಹುತಾತ್ಮ ಯೋಧರ ಕುಟುಂಬಗಳಿಗೆ ಸಾಂತ್ವನ, ಗಣ್ಯರಿಂದ ಪರಿಹಾರ ಹರಿದು ಬರುತ್ತಿದೆ. ಈ ಮಧ್ಯೆ ಯೋಧರ ಪರಾಕ್ರಮವನ್ನು ಬಿಂಬಿಸಿರುವ, ಉಗ್ರರ ಮೇಲೆ ನಡೆದ ಸರ್ಜಿಕಲ್​ ಸ್ಟ್ರೈಕ್​ ಆಧಾರಿತ ಬಾಲಿವುಡ್​​​​​ನ ಉರಿ ದಿ ಸರ್ಜಿಕಲ್​ಸ್ಟ್ರೈಕ್​​​​ ಚಿತ್ರತಂಡ ಯೋಧರ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ಪರಿಹಾರ ನೀಡಿದೆ. ಈ ಕುರಿತು ಆರ್​ಎಸ್​ವಿಪಿ ಪ್ರೊಡಕ್ಷನ್​ನ ಮುಖ್ಯಸ್ಥರು ತಮ್ಮ ಟ್ವಿಟರ್​ನಲ್ಲಿ ಮಾಹಿತಿ ನೀಡಿದ್ದಾರೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv