ಸದನಕ್ಕೆ ಅಧಿಕಾರಿಗಳು ಏಕೆ ಹಾಜರಾಗ್ತಿಲ್ಲ..? ಅಧಿಕಾರಿಗಳ ವಿರುದ್ಧ ಸಭಾಪತಿ ಬಸವರಾಜ್ ಹೊರಟ್ಟಿ ಗರಂ

ಬೆಂಗಳೂರು: ಹಂಗಾಮಿ ಸಭಾಪತಿ ಬಸವರಾಜ್ ಹೊರಟ್ಟಿ ಮತ್ತೆ ಸದನಕ್ಕೆ ಹಾಜರಾಗದ ಅಧಿಕಾರಿಗಳ ವಿರುದ್ದ ಗರಂ ಆಗಿದ್ದಾರೆ. ಆಯಾ ಇಲಾಖೆಯ ವಿಚಾರಗಳು ಚರ್ಚೆ ನಡೆಯುವಾಗ ಅಧಿಕಾರಿಗಳು ಯಾಕೆ ಹಾಜರು ಇರುವುದಿಲ್ಲ ಅಂತಾ ಹಂಗಾಮಿ ಸಂಭಾಪತಿ ಬಸವರಾಜ್ ಹೊರಟ್ಟಿ ಪ್ರಶ್ನಿಸಿದ್ದಾರೆ.

ಅಧಿಕಾರಿಗಳೇನು ಪುಕ್ಕಟೆ ಬರ್ತಾರಾ..?
ಹುಡುಗಾಟಿಕೆಗೆ ನಾವು ಸದನ ನಡೆಸುತ್ತೇವಾ, ಅಧಿಕಾರಿಗಳೇನು ಪುಕ್ಕಟೆ ಬರ್ತಾರಾ? ಪಗಾರ ತೆಗೆದುಕೊಳ್ಳೋದಿಲ್ಲವಾ? ಅಂತಾ ಪ್ರಶ್ನಿಸುವ ಮೂಲಕ ಹಂಗಾಮಿ ಸಭಾಪತಿ ಬಸವರಾಜ್ ಹೊರಟ್ಟಿ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ. ಹೀಗೆಯೇ ಮುಂದುವರಿದ್ರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ. ಮುಂದಿನ‌ ಬಾರಿ ಪೀಠದಿಂದ ನಾನೇ ಆದೇಶ ನೀಡಬೇಕಾಗುತ್ತದೆ ಅಂತಾ ಎಚ್ಚರಿಸಿದ್ರು.

ಇವತ್ತು ಯಾವ ಅಧಿಕಾರಿಗಳು ಬಂದಿಲ್ಲ? ಯಾಕೆ ಬಂದಿಲ್ಲ ಎಂಬ ಬಗ್ಗೆ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಜತೆಗೆ ಚರ್ಚೆ ನಡೆಸಿ, ವಿವರಣೆ ನೀಡುವಂತೆ ಸಭಾನಾಯಕಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾರಿಗೆ ಸಭಾಪತಿ ಬಸವರಾಜ್ ಹೊರಟ್ಟಿ ಸೂಚನೆ ನೀಡಿದ್ರು.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv