‘ಸ್ಮಾರಕ’ ಪ್ರತಿಮೆಗಳಿಂದ ಯುಪಿ ಸರ್ಕಾರದ ಖಜಾನೆಗೆ ಆದಾಯ’

ನವದೆಹಲಿ: ಉತ್ತರಪ್ರದೇಶದಲ್ಲಿ ನಿರ್ಮಿಸಲಾಗಿರುವ ದಲಿತ ನಾಯಕರ ಸ್ಮಾರಕಗಳು ಹಾಗೂ ಪ್ರತಿಮೆಗಳು ಪ್ರವಾಸಿಗರ ಆಕರ್ಷಣೀಯ ಸ್ಥಳಗಳು. ಇವುಗಳಿಂದಾಗಿ ಉತ್ತರಪ್ರದೇಶ ಸರ್ಕಾರಕ್ಕೆ ಸತತ ಆದಾಯ ಬರುತ್ತಿದೆ ಅಂತ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ. ಮೊನ್ನೆಯಷ್ಟೇ ಸುಪ್ರೀಂಕೋರ್ಟ್, ತಮ್ಮ ಹಾಗೂ ಪಕ್ಷದ ಚಿಹ್ನೆಯ ಪ್ರತಿಮೆಗಳ ನಿರ್ಮಾಣಕ್ಕೆ ಬಳಕೆ ಮಾಡಿದ ಸಾರ್ವಜನಿಕರ ಹಣವನ್ನ ಹಿಂತಿರುಗಿಸಬೇಕು ಅಂತಾ ಮಾಯಾವತಿಗೆ ಸೂಚಿಸಿತ್ತು.

ಲಕ್ನೌ ಹಾಗೂ ನೋಯ್ಡಾದಲ್ಲಿ ಸಾರ್ವಜನಿಕ ಉದ್ಯಾನವನಗಳಲ್ಲಿ ಪ್ರತಿಮೆಗಳನ್ನ ಸ್ಥಾಪಿಸಲಾಗಿದೆ. ಈ ಬಗ್ಗೆ ಟ್ವಿಟರ್​ನಲ್ಲಿ ಪ್ರತಿಕ್ರಿಯಿಸಿರುವ ಮಾಯಾವತಿ ಸುಪ್ರೀಂಕೋರ್ಟ್, ಮೌಖಿಕವಾಗಿ ನೀಡಿರುವ ಸೂಚನೆಯನ್ನೇ ದೊಡ್ಡದಾಗಿ ಮಾಡಬೇಡಿ ಅಂತ ಹೇಳಿದ್ದಾರೆ. ಜೊತೆಗೆ ಇದನ್ನಿಟ್ಟುಕೊಂಡೇ ಬಿಜೆಪಿ ನಾಯಕರು ಗಾಳಿಪಟ ಹಾರಿಸೋದು ಬೇಡ ಅಂತಲೂ ಆಗ್ರಹಿಸಿದ್ದಾರೆ. ಈ ವಿಚಾರದಲ್ಲೂ ನ್ಯಾಯ ಸಿಗುತ್ತೆ ಅನ್ನೋ ನಂಬಿಕೆ ನನಗಿದೆ ಅಂತ ಮಾಯಾವತಿ ಹೇಳಿದ್ದಾರೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv