ಉಪ್ಪಿ ಅಣ್ಣನ ಮಗನ ‘ಸಿಕ್ಸ್ ಪ್ಯಾಕ್​’ ತಯಾರಿ..!

ಸ್ಯಾಂಡಲ್​ವುಡ್​ ಸೇರಿದಂತೆ ಸಿನಿ ಇಂಡಸ್ಟ್ರಿಯಲ್ಲಿ ಸ್ಟಾರ್ ನಟರ ಮಕ್ಕಳು ಸಿನಿಮಾರಂಗಕ್ಕೆ ಎಂಟ್ರಿ ಕೊಡೋದು ಕಾಮನ್. ಆದ್ರೀಗ ಸಹೋದರರು, ಸಂಬಂಧಿಗಳ ಹವಾ ಜೋರಾಗಿದೆ. ಯಾಕಂದ್ರೆ ಇತ್ತೀಚಿಗಷ್ಟೇ ರಕ್ಷಿತಾ ಪ್ರೇಮ್ ಸಹೋದರ ಅಭಿಷೇಕ್ ರಾವ್ ‘ಏಕ್​ಲವ್​ ಯಾ’ ಸಿನಿಮಾದ ಮೂಲಕ ಚಂದನವನದ ಬಾಗಿಲು ತಟ್ಟಿದ್ರು. ಇದೀಗ ರಿಯಲ್ ಸ್ಟಾರ್ ಉಪ್ಪಿ ಅಣ್ಣನ ಮಗ ನಿರಂಜನ್ ಸರದಿ.

ಅದ್ಧೂರಿ-2 ಗಾಗಿ ಭಾರೀ ವರ್ಕೌಟ್..!

ಎರಡು ವರ್ಷದ ಹಿಂದೆಯೇ ಸಿಲ್ವರ್ ಸ್ಕ್ರೀನ್​ನಲ್ಲಿ ಕಾಣಿಸಿಕೊಂಡಿದ್ದ ನಿರಂಜನ್ ಪ್ರಿಯಾಂಕಾ ಉಪೇಂದ್ರ ಜೊತೆಯಾಗಿ ‘ಸೆಕೆಂಡ್ ಹಾಫ್’ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ಒಂದೊಳ್ಳೆ ಪಾತ್ರದ ಮೂಲಕ ಗುರ್ತಿಸಿಕೊಂಡಿದ್ರು. ಇದೀಗ ಮೊದಲ ಬಾರಿಗೆ ಅದ್ಧೂರಿ-2 ಸಿನಿಮಾದ ಮೂಲಕ ನಾಯಕವಾಗಿ ಮಿಂಚೋಕೆ ರೆಡಿಯಾಗ್ತಿದ್ದಾರೆ. ಅಂದ್ಹಾಗೆ ಅದ್ಧೂರಿ ಟೈಟಲ್ ಕೇಳಿದಾಕ್ಷಣ ನೆನಪಾಗೋದು ಧ್ರುವಾ ಸರ್ಜಾ ನಟಿಸಿದ್ದ ಅದೇ ಬ್ಲಾಕ್ ಬಾಸ್ಟರ್​ ’ಅದ್ಧೂರಿ’ ಸಿನಿಮಾ ಪಕ್ಕಾ ಲವ್ ಎಂಟಟೈನ್ ಇದ್ದ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಆದ್ರೆ ಇದೀಗ ಅದ್ಧೂರಿ-2 ಬೇರೆಯದೇ ಕಥೆ ಹೊಂದಿದೆ. ಹಾಗಾಗಿ ಫಿಟ್​ ಆಂಡ್ ಫೈನ್ ಆಗಿ ಕಾಣೋಕೆ ಜಸ್ಟ್​ 90 ದಿನಗಳಲ್ಲಿ ಸಿಕ್ಸ್​ ಪ್ಯಾಕ್ ಮಾಡಿ ಕಬ್ಬಿಣದಂತೆ ದೇಹವನ್ನು ಹುರಿಗೊಳಿಸಿದ್ದಾರೆ. ಮಾಸ್ ಹೀರೋ ಆಗಿ ಹೊಸ ಅವತಾರದಲ್ಲಿ ನಿರಂಜನ್ ಮಿಂಚೋಕೆ ನಿರಂಜನ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇನ್ನು ಚಿತ್ರಕ್ಕೆ ವೆಂಕಟೇಶ್ ಡೈರೆಕ್ಷನ್ ಮಾಡ್ತಿದ್ದು, ಅದ್ಧೂರಿ ಸಿನಿಮಾ ನಿರ್ಮಾಣ ಮಾಡಿದ್ದ ಶಂಕರ್ ರೆಡ್ಡಿ ಈ ಚಿತ್ರಕ್ಕೂ ಬಂಡವಾಳ ಹೂಡಲಿದ್ದಾರೆ. ಈಗಾಗಲೇ ಚಿತ್ರದ ಕಥೆ ಕ್ಯೂರಿಯಾಸಿಟಿ ಹುಟ್ಟಿಸಿದ್ದು, ನಾಯಕಿಯ ಜೊತೆ ಯಾರೆಲ್ಲಾ ತಾರಾಗಣ ಇರ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv