ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ: ಉಪೇಂದ್ರ

ಬಾಗಲಕೋಟೆ: ಪ್ರಚಾರದ ಕೆಲಸ ಜಾಸ್ತಿ ಇರೋ ಕಾರಣ ನಾನು ಸ್ಪರ್ಧೆ ಮಾಡಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 27 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಇದ್ದಾರೆ. ಯಥಾರಾಜ, ತಥಾ ಪ್ರಜಾ. ನಮ್ಮಲ್ಲಿ ಹಣ, ಪವರ್ ಶೇ. 20 ಜನರನ್ನು ಆಳತಾ ಇದೆ. ನಮ್ಮ ಪಾರ್ಟಿಯ ವ್ಯವಸ್ಥೆ ಮುಂದಿನ ಜನರೇಶನ್‌ಗಾದ್ರೂ ಹೆಲ್ಪ ಆಗಬಹುದು. ಪ್ರವಾಹದ ಜೊತೆ ಹೋಗುವುದು ಸತ್ತ ಮೀನುಗಳು. ಪ್ರವಾಹದ ವಿರುದ್ಧ ಹೋಗುವುದು ಜೀವಂತ ಮೀನುಗಳು. ಪಾಲಿಟಿಕ್ಸ್ ಬಿಜಿನೆಸ್ ಅಲ್ಲ, ಸಮಾಜ ಸೇವೆ. ರಾಜ್ಯಕ್ಕೆ ಪ್ರಬಲ ಪ್ರಾದೇಶಿಕ ಪಕ್ಷ ಬೇಕು. ಯಾರ ಜೊತೆಗೂ ಹೊಂದಾಣಿಕೆ ಆಗದೇ ಜನರ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಪಕ್ಷ ಬೇಕು. ಜನರೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ದೇಶದಲ್ಲಿ ರಾಜಕಾರಣವೇ ಹೋಗಿ ಬಿಡಬೇಕು ಎಂದು ಉಪೇಂದ್ರ ಅಭಿಪ್ರಾಯಪ್ಟರು.

ನಾನು ಹೊರಟಿರೋ ದಾರಿಯಲ್ಲಿ ಯಶಸ್ಸು ಸಿಗುವುದು ತುಂಬ ಕಷ್ಟ. ಪರ್ಯಾಯ ದಾರಿ ಆರಂಭ ಮಾಡಿದ್ದೇವೆ. ನೋ ಪಾರ್ಟಿ ಫಂಡ್. ಸಾರ್ವಜನಿಕರಿಂದ ಹಣ ಸ್ವೀಕರಿಸಲ್ಲ. ಱಲಿ, ಸಭೆ, ಸ್ಟಾರ ಪ್ರಚಾರಕರು ಯಾರೂ ಇಲ್ಲ. ಜನರೇ ನಮ್ಮ ಸ್ಟಾರ್ ಪ್ರಚಾರಕರು
ಕೆಲಸ ಕೊಟ್ಟರೆ ಮಾಡುತ್ತೇವೆ. ಸಂಬಳ ಕೊಡ್ತೀರಿ ಅದಕ್ಕೆ ಕೆಲಸ ಕೇಳಿ ಎಂದು ಉಪೇಂದ್ರ ಹೇಳಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv